ಕಬಿನಿ ನಾಲೆಯಲ್ಲಿ ಈಜಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು
Update: 2017-12-04 20:21 IST
ಕೊಳ್ಳೇಗಾಲ,ಡಿ.4: ಈಜಲು ಹೋಗಿದ್ದ ಇಬ್ಬರು ಕಾರ್ಮಿಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಬಳಿಯ ಕಬಿನಿ ನಾಲೆಯಲ್ಲಿ ನಡೆದಿದೆ.
ತಮಿಳುನಾಡಿನ ನೈವಲಿನಗರದ ಗುರುಪ್ರಸಾದ್(20), ಪೂವರಸ್(19) ಮೃತ ವ್ಯಕ್ತಿಗಳು.ಗ್ರಾಮದ ಹೊರವಲಯದ ನಾಲೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ಈ ಬಗ್ಗೆ ವಿದ್ಯುತ್ ಗುತ್ತಿಗೆದಾರ ತಂಗರಾಜು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರು.
ಗ್ರಾಮಾಂತರ ಪೊಲೀಸರು ಸೋಮವಾರ ನಾಲೆಯನ್ನು ಮೃತದೇಹಕ್ಕಾಗಿ ಶೋಧನೆ ನಡೆಸಲಾಗಿದ್ದು. ಮೃತರಲ್ಲಿ ಗುರುಪ್ರಸಾದ್ ಮೃತದೇಹ ಸಿಕ್ಕಿದೆ. ಇನ್ನೊಂದು ಮೃತದೇಹಕ್ಕಾಗಿ ತೀವ್ರ ಹುಡುಕಾಟಕ್ಕಾಗಿ ನಡೆಸಲಾಗುತ್ತಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಡಿ.ಜಿ.ರಾಜಣ್ಣ ತಿಳಿಸಿದರು.