×
Ad

ವಿದ್ಯುತ್ ತಂತಿ ತಗಲಿ ಕಾರ್ಮಿಕ ಮೃತ್ಯು

Update: 2017-12-05 23:03 IST

ಕಳಸ, ಡಿ. 5: ಅಡಿಕೆ ಕೊನೆ ಇಳಿಸಲು ತೆರಳಿದ್ದ ಕೂಲಿ ಕಾರ್ಮಿಕನೋರ್ವ ವಿದ್ಯುತ್ ತಂತಿ ತಗಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಮೀಪದ ಬಾಳೆಹೊಳೆ ಎಂಬಲ್ಲಿ ಮಂಗಳವಾರ ನಡೆದಿದೆ ಎನ್ನಲಾಗಿದೆ.

ಮೃತನನನ್ನು ಕಳಸ ಬಳಿಯ ಹರೀಶ(33) ಎಂದು ಗುರುತಿಸಲಾಗಿದೆ. ಈತ ಮೂಡಿಗೆರೆ ತಾಲೂಕಿನ ಬಾಳೆಹೊಳೆ ಗ್ರಾಮದ ಸಮೀಪ ಇರುವ ಶಶಿಧರ ಎಂಬವರಿಗೆ ಸೇರಿದ ಅಡಿಕೆ ತೋಟದಲ್ಲಿ ಅಡಿಕೆ ಕೊನೆ ಇಳಿಸಲು ಬೆಳಗ್ಗೆ ಎಂದಿನಂತೆ ತೆರಳಿದ್ದ.

ಈ ಸಮಯದಲ್ಲಿ ಅಡಿಕೆ ಕೊನೆ ತೆಗೆಯಲು ಬಳಸುತ್ತಿದ್ದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಂತಿ ತಗಲಿದೆ. ತಕ್ಷಣ ವಿದ್ಯುತ್ ಶಾಕ್‌ಗೊಳಗಾಗಿ ತೀವ್ರ ಸುಟ್ಟ ಗಾಯದಿಂದ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News