ಮತದಾರರ ಪಟ್ಟಿ: ಆಕ್ಷೇಪಣೆಗೆ ಡಿ.21ರವರೆಗೆ ಅವಕಾಶ - ಡಿಸಿ ಡಾ.ವಿನ್ಸೆಂಟ್ ಡಿಸೋಜ
ಮಡಿಕೇರಿ, ಡಿ.5: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯ ಆಕ್ಷೇಪಣೆ ಸ್ವೀಕರಿಸಲು ಡಿ.21ರವರೆಗೂ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ರಿಚರ್ಡ್ ಡಿಸೋಜ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಬಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಬೂತ್ ಮಟ್ಟದ ಅಧಿಕಾರಿಗಳು ಕ್ರಮವಹಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ಹೆಚ್ಚುವರಿ ಡಿಸಿ ಎಂ.ಸತೀಶ್ ಕುಮಾರ್ ಮಾತನಾಡಿ, ಪೂರಕ ದಾಖಲೆಗಳಿದ್ದರೆ ಹಳೆಯ ಪದವೀಧರರಿಗೂ ಅವಕಾಶವಿದೆ. ಶಿಕ್ಷಕರು ಮೂರು ವರ್ಷ ಗಳ ಕಾಲ ಕೆಲಸ ನಿರ್ವಹಿಸಿರುವ ಬಗ್ಗೆ ದಾಖಲೆ ನೀ ಬೇಕು. ಹೊಸದಾಗಿ ಹೆಸರು ಸೇರಿಸಲು ಕರಡು ಪ್ರತಿಯನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಭಾರತದ ಚುನಾವಣಾ ಆಯೋಗದ ಪ್ರಕಾರ ಜನವರಿ 1-2018ಕ್ಕೆ 18 ವರ್ಷ ಪೂರ್ಣಗೊಂಡಿದ್ದರೆ ಮಾತ್ರ ಮತದಾರ ಪಟ್ಟಿಯ ನಮೂನೆ 6ರಲ್ಲಿ ಸೇರ್ಪಡೆಗೆ ಅವಕಾಶವಿರುತ್ತದೆ. ನಮೂನೆ 7 ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದು, ನಮೂನೆ 8 ತಿದ್ದುಪಡಿ, ಪ್ರತಿಯೊಂದು ಪಕ್ಷದವರು ಬೂತ್ ಮಟ್ಟದ ಏಜೆಂಟ್ ನೇಮಕ ಮಾಡಬೇಕು. ಅಂತವರ ಹೆಸರನ್ನು ಪಟ್ಟಿ ಮಾಡಿ ಎಂದು ಹೇಳಿದರು. ಡಿ.17ರವರೆಗೆ ವಿಶೇಷ ಪ್ರಚಾರ ಕಾರ್ಯಕ್ರಮ ಮಾಡಬೇಕು. ಮರಣ ಹೊಂದಿರುವ ಎರೆಡೆರಡೂ ಚುನಾ ವಣಾ ಗುರುತಿನ ಚೀಟಿ ಹೊಂದಿರುವವರನ್ನು ತೆಗೆದು ಹಾಕಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ತೆನ್ನಿರಾಮೈನಾ, ಜೆಡಿಎಸ್ ಪಕ್ಷದ ಭರತ್ ಮತ್ತು ಮುಹಮ್ಮದ್ ಅಬ್ರಹಾಂ ಸಿಪಿಎಂ ಪಕ್ಷದ ರಮೇಶ್ ಎಚ್.ಆರ್ ಮತ್ತು ಶಿವಪ್ಪಎಚ್.ಬಿ ಇತರರಿದ್ದರು.