ಮಣ್ಣಿನ ಫಲವತ್ತತೆ ಜಾಗೃತಿಗೆ ಸಂವಾದ ಅಗತ್ಯ: ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ, ಡಿ.5: ರೈತರಲ್ಲಿ ಮಣ್ಣಿನ ಫಲವತ್ತತೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಗತಿಪರ ರೈತರ ಹಾಗೂ ವಿಜ್ಞಾನಿಗಳ ತಂಡದೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಗ್ರ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸಲು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಮಣ್ಣು ದಿನಾಚರಣೆ ಅಂಗವಾಗಿ ರೈತರಿಗೆ ಮಣ್ಣು ಪರೀಕ್ಷಾ ಕಾರ್ಡ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರ ಹತ್ತು ಹಲವು ಸೌಲಭ್ಯಗಳನ್ನು ಜಾರಿಗೊಳಿಸುತ್ತಿವೆ. ರೈತರ ಜಮೀನುಗಳಲ್ಲಿ ಮಣ್ಣಿನ ಫಲವತ್ತೆ ಬಗ್ಗೆ ರೈತರ ಜಮೀನುಗಳಿಗೆ ಹೋಗಿ ನಿಗದಿತ ಅವಧಿಯೊಳಗೆ ಮುಗಿಸುವಂತೆ ತಿಳಿಸಿದರು.
ಕೃಷಿ ಉಪನಿದೇಶಕಿ ಡಾ, ಸುಜಾತಾ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿರುವ ಫಲವತ್ತೆಯ ಮಣ್ಣನ್ನು ರಕ್ಷಣೆ ಮಾಡುವಲ್ಲಿ ನಿರ್ಲಕ್ಷ ತೋರುತ್ತಿದ್ದು, ಒಂದು ಇಂಚು ಮಣ್ಣನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಬಹಳ ವರ್ಷಗಳೇ ಬೇಕಾಗುತ್ತದೆ. ತಾಲೂಕಿನಲ್ಲಿ ಫಲವತ್ತೆತೆಯ ಮಣ್ಣು ಅರ್ಧ ಅಡಿಯಷ್ಟಿದ್ದು ಬೆಳೆ ಬೆಳೆಯಲು ಯೋಗ್ಯವಾಗುವುದಿಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ನೀರಾವರಿ ಪದ್ಧತಿಯಲ್ಲಿ ಜಮೀನುಗಳಲ್ಲಿ ನೀರು ಹಾಯಿಸಿದರೆ ಮಣ್ಣು ಕೊಚ್ಚಿ ಹೋಗುತ್ತದೆ ಎಂಬ ಉದ್ದೇಶದಿಂದ ಈ ಯೋಜನೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸುವ ಮೂಲಕ ಬೆಳೆಗಳಿಗೆ ನೀರು ಹಾಯಿಸುವ ಯೋಜನೆಯಿದೆ ಎಂದು ಅವರು ಹೇಳಿದರು.
ಬಬ್ಬೂರು ಕೃಷಿ ವಿಜ್ಞಾನಿ ಡಾ. ಪ್ರಕಾಶ್, ಅಖಂಡ ರಾಜ್ಯ ರೈತ ಸಂಘದ ಸೋಮಗುದ್ದು ರಂಗಸ್ವಾಮಿ, ಸಹಾಯಕ ಕೃಷಿ ನಿದೇರ್ಶಕ ಡಾ. ಮಾರುತಿ, ಪ್ರಗತಿಪರ ರೈತರಾದ ದಯಾನಂದಮೂರ್ತಿ, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಮಾತನಾಡಿದರು.
ತಾಪಂ ಸದಸ್ಯ ಗಿರಿಯಪ್ಪ, ಎಇಪಿಎಂಸಿ ಅಧ್ಯಕ್ಷ ಸಿ.ಆರ್. ಶಿವಣ್ಣ, ಉಪಾಧ್ಯಕ್ಷ ದೊಡ್ಡರಂಗಪ್ಪ, ರೈತ ಮುಖಂಡ ಅಂಜೀನಪ್ಪ, ಕೃಷಿ ಅಧಿಕಾರಿಗಳಾದ ಗಿರಿಶ್ ರೆಡ್ಡಿ, ತಾಂತ್ರಿಕ ಅಧಿಕಾರಿ ಡಾ.ಅಶೋಕ್ ಇತರರಿದ್ದರು.