ಗುಜರಾತ್‌ನತ್ತ ಒಖಿ...

Update: 2017-12-05 18:24 GMT

ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪಕ್ಕೆ ಪ್ರಳಯಾಂತಕನಂತೆ ಎರಗಿ ಭಾರೀ ನಾಶನಷ್ಟ ಉಂಟು ಮಾಡಿದ್ದ ಒಖಿ ಚಂಡಮಾರುತ ಗುಜರಾತ್ ಸಮೀಪಿಸುತ್ತಿದ್ದು, ಮಂಗಳವಾರ ರಾತ್ರಿಯಿಂದ ಗುಜರಾತ್ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆ ಸುರಿಯುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುಂಬೈ ಸಿಂಧುದುರ್ಗ, ಥಾಣೆ, ರಾಯ್‌ಗಢ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor