ಸಿಬಿಐ ರಾಜಕೀಯ ಪ್ರೇರಿತ: ಮಲ್ಯ ವಕೀಲ

Update: 2017-12-06 04:29 GMT

ಲಂಡನ್, ಡಿ.6: ಭಾರತ ಸರ್ಕಾರ ಒದಗಿಸಿರುವ ಪುರಾವೆ ಮತ್ತು ಸಿಬಿಐ ಬಗ್ಗೆ ವಾಗ್ದಾಳಿ ನಡೆಸಿರುವ ಮಲ್ಯ ಪರ ವಕೀಲರು, ಎಲ್ಲವೂ ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದಾರೆ. ಬ್ರಿಟನ್ ನ್ಯಾಯಾಲಯದಲ್ಲಿ ಮದ್ಯ ದೊರೆಯ ಗಡೀಪಾರು ಅರ್ಜಿ ಬಗೆಗಿನ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು.

ಸ್ವಿಡೀಶ್ ಜ್ಯುಡೀಶಿಯಲ್ ಅಥಾರಿಸಿಯ ಪ್ರತಿನಿಧಿ ಕ್ಲೇರ್ ಮಾಂಟ್ಗೊಮೆರಿ ಕ್ಯೂಸಿ ಆರೋಪಿ ಪರ ವಾದ ಮಂಡಿಸಿದರು. ಇದು ಸಂಪೂರ್ಣ ರಾಜಕೀಯ ಹಸ್ತಕ್ಷೇಪದ ವಿಚಾರವಾಗಿದ್ದು, ಇದರಲ್ಲಿ ವಾದಿಸುವ ಅಂಶಗಳೇನೂ ಇಲ್ಲ ಎಂದು ಅವರು ಪ್ರತಿಪಾದಿಸಿದರು.

"ಪ್ರಕರಣದಲ್ಲಿ ಭಾರತ ಸರ್ಕಾರ ಯಾವುದೇ ಸೂಕ್ತ ಪುರಾವೆಗಳನ್ನು ಒದಗಿಸಿಲ್ಲ. ಇದು ವ್ಯಾಪಾರದ ವೈಫಲ್ಯ ಮತ್ತು ವಂಚನೆ ಕುರಿತ ಹಳೆಯ ಕಥೆಯನ್ನೇ ಮತ್ತೆ ಹೇಳುತ್ತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. ಅವರ ದಾಖಲೆಗಳಲ್ಲಿ ಯಾವ ಪ್ರಮುಖ ಅಂಶವೂ ಇಲ್ಲ" ಎಂದು ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News