×
Ad

ವಾರ್ಡ್ ನಿರ್ಲಕ್ಷ್ಯದ ಆರೋಪ: ಮೇಯರ್ ವಿರುದ್ಧ ಮಹಿಳೆಯರ ಪ್ರತಿಭಟನೆ

Update: 2017-12-06 22:12 IST

ಶಿವಮೊಗ್ಗ, ಡಿ. 5: ಮೇಯರ್ ಏಳುಮಲೈ ಪ್ರತಿನಿಧಿಸುವ 27ನೇ ವಾರ್ಡ್‌ನಲ್ಲಿ ಯಾವ ಅಭಿವೃದ್ಧಿ ಕೆಲಸವೂ ನಡೆದಿಲ್ಲ. ಮೂಲಭೂತ ಸೌಕರ್ಯಗಳಿಲ್ಲದೆ ಜನರು ಪರದಾಡುವಂತಾಗಿದೆ ಎಂದು ಆರೋಪಿಸಿ ಆ ಭಾಗದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಮೇಯರ್ ಏಳುಮಲೈ ಅವರಿಗೆ ಧಿಕ್ಕಾರ ಕೂಗಿದ ಮಹಿಳೆಯರು, ಮತದಾರರ ಅಹವಾಲನ್ನು ಮೇಯರ್ ಕೇಳುತ್ತಿಲ್ಲ. ಮನೆ ಬಾಗಿಲಿಗೆ ಹೋದರೂ ಬಾಗಿಲು ತೆಗೆಯುತ್ತಿಲ್ಲ. ದೂರವಾಣಿ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ವಾರ್ಡ್ ಸಂಚಾರ ಮಾಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.

ಚರಂಡಿ, ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಹಂದಿಗಳ ಕಾಟ ಮಿತಿಮೀರಿದೆ. ಜಾತಿ ಪ್ರಮಾಣ ಪತ್ರ, ಗ್ಯಾಸ್ ಸಂಪರ್ಕ ಮೊದಲಾದ ಅನುಕೂಲಗಳನ್ನು ಕಲ್ಪಿಸಿಕೊಡಿ ಎಂದು ಕೇಳಿದರೂ ಸಹ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆ ವಾರ್ಡ್‌ನ ಪ್ರಮುಖರಾದ ಸುವರ್ಣ ನಾಗರಾಜ್, ಪದ್ಮಿನಿ, ಜಯಲಕ್ಷ್ಮಿೀ, ಶ್ರುತಿ, ಪೂಜಾ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News