×
Ad

ಅಪಘಾತ ಸ್ಥಳಗಳಲ್ಲಿ 8 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿ: ಪ್ರತಾಪಸಿಂಹ

Update: 2017-12-06 22:45 IST

 ಹುಣಸೂರು, ಡಿ.6: ತಾಲೂಕಿನಲ್ಲಿ ಒಟ್ಟು 4 ಅಪಘಾತ ಕಪ್ಪು ಸ್ಥಳವನ್ನು ಗುರುತಿಸಲಾಗಿದ್ದು, 8 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆಯಿಂದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

 ಬಿಳಿಕೆರೆ ಬೈಪಾಸ್‌ನಲ್ಲಿ ಅಪಘಾತ ಸ್ಥಳವನ್ನು ಅಭಿವೃದ್ಧಿ ಪಡಿಸುವ 4 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಯಶೋಧಪುರ ಗ್ರಾಮದ ಮುಖ್ಯ ರಸ್ತೆ, ಚಿಲ್ಕುಂದ ಗ್ರಾಮದ ರಸ್ತೆ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

ದೇಶದಲ್ಲಿ 377 ಜನ ಪ್ರತಿದಿನ ಅಪಘಾತದಿಂದ ಸಾವನಪ್ಪುತ್ತಿದ್ದಾರೆ. ವರ್ಷದಲ್ಲಿ 1.5 ಲಕ್ಷ ಜನ ಅಪಘಾತದಿಂದ ಗಾಯಾಳುಗಳು, ಅಂಗವಿಕಲರಾಗುತ್ತಿದ್ದಾರೆ. ವರ್ಷದಲ್ಲಿ 3 ಲಕ್ಷ ಸಣ್ಣಪುಟ್ಟ ಅಪಘಾತಗಳು ಆಗುತ್ತಿವೆ. ಆದ್ದರಿಂದ ಒಳ್ಳೆಯ ರಸ್ತೆಯ ಜೊತೆಗೆ ಅಪಘಾತದ ಸ್ಥಳವನ್ನು ಗುರುತಿಸಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಕೇಂದ್ರ ಸರಕಾರ ಆದ್ಯತೆ ನೀಡಿದೆ. ಹಿಂದಿನ ಸರಕಾರ 3.5 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿತ್ತು, ಮೋದಿ ಸರಕಾರ 10 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಪರಮೇಶ್, ಸದಸ್ಯ ಸುರೇಶ್, ಬಿಜೆಪಿ ಮುಖಂಡರಾದ ನಾಗಣ್ಣ, ಯೋಗಾನಂದ್, ನಗರಾಧ್ಯಕ್ಷ ರಾಜೇಂದ್ರ. ಹನಗೋಡು ಮಂಜುನಾಥ್, ಮಧು, ಕಾಂತರಾಜು, ಗೋವಿಂದರಾಜು ಉಪಸ್ಥಿತದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News