ಮೂಡಿಗೆರೆ ಪಟ್ಟಣದಲ್ಲಿ ವಿವಿಧ ಕಾಮಗಾರಿ ಪರಿಶೀಲನೆ

Update: 2017-12-07 11:46 GMT

ಮೂಡಿಗೆರೆ, ಡಿ.7: (ಪೊಟೊ: ಕಾಮಗಾರಿ ವೀಕ್ಷಣೆ 1, 2) ಕ್ಷೇತ್ರದಾದ್ಯಂತ ವಿವಿಧ ಕಾಮಗಾರಿ ನಡೆಸಲು ತಾವು ಸರಕಾರದಿಂದ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿರುವುದಾಗಿ ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

ಅವರು ಗುರುವಾರ ಪಟ್ಟಣದ ವಿವಿಧ ರಸ್ತೆಗಳ ಕಾಂಕ್ರೀಟಿಕರಣ, ವಿದ್ಯುತ್ ಕಂಬ ಮತ್ತು ತಂತಿ ಬದಲಿಸುವ ಕಾಮಗಾರಿ ಸ್ಥಳಕ್ಕೆ ಪಪಂ ಅಧ್ಯಕ್ಷರು ಮತ್ತು ಅಧಿಕಾರಿಗಳ ಜತೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. 

ನಗರೋತ್ತಾನ ಯೋಜನೆಯಡಿ ಪ್ರಾರಂಭಿಕವಾಗಿ 5 ಕೋಟಿ, ನಂತರ 2 ಕೋಟಿ ಅನುಧಾನ ಬಿಡುಗಡೆಗೊಂಡಿದೆ. ಇದರಲ್ಲಿ 3.50 ಕೋಟಿ ರೂಗಳನ್ನು ರಸ್ತೆ ಕಾಂಕ್ರೀಟ್ ಕಾಮಗಾರಿ ಗಳಿಗೆ, 1.50 ಕೋಟಿ ಬಾಕ್ಸ್ ಚರಂಡಿ ಮತ್ತು ಇಂಟರ್ ಲಾಕ್ ಅಳವಡಿಕೆಗೆ, ಕಿತ್ತಲೆಗಂಡಿ ಹೇಮಾವತಿ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೋರೈಕೆಯ ನೂತನ ಎಕ್ಷಪ್ರಸ್ ಲೈನ್ ಕಾಮಗಾರಿಗೆ 90 ಲಕ್ಷ, ಗ್ರಂಥಾಲಯ ಮತ್ತಿತರ ಅಭಿವೃದ್ಧಿಗಾಗಿ ಉಳಿದ ಹಣ ಬಳಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಆದರ್ಶ ಗ್ರಾಮವಿಕಾಸ ಯೋಜನೆಯಡಿ ಮಳಲೂರು ಗ್ರಾಮದ ಪರಿಶಿಷ್ಟರ ಅಭಿವೃದ್ದಿಗೆ 1 ಕೋಟಿ, ಸುಂಕಸಾಲೆ ಮತ್ತು ಕಳಸಕ್ಕೆ ತಲಾ 1 ಕೋಟಿ, ಬಿ.ಹೊಸಳ್ಳಿ, ಬೆಳಗೋಡು, ಹಳೇಹಳ್ಳಿಗೆ ತಲಾ 2 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಎಂಜಿಎಂ ಸರ್ಕಾರಿ ಆಸ್ಪತ್ರೆಯ ನೂತನ ಡಯಾಲಿಸಸ್ ಘಟಕ, ವಿದ್ಯುತ್ ಕಾಮಗಾರಿ ಮತ್ತು ನೂತನ ವಸತಿಗೃಹ ಕಟ್ಟಡಗಳಿಗೆ 5 ಕೋಟಿ ರೂ.ಗಳು ಬಿಡುಗಡೆಯಾಗಿವೆ ಎಂದು ಮಾಹಿತಿ ನೀಡಿದರು.ಆಣೂರು ಕಲ್ಲುಗುಂಡೆ ದೇವಸ್ಥಾನದ ಅಭಿವೃದ್ಧಿಗೆ 1.10 ಕೋಟಿ, ಕೊಟ್ಟಿಗೆಹಾರದ ಮಲೆನಾಡು ಸಕ್ರ್ಯೂಟ್ ಯೋಜನೆಗೆ 1.81 ಕೋಟಿ, ಬಂಕೇನಹಳ್ಳಿ ಸೇತುವೆ ದುರಸ್ಥಿಗೆ 20 ಲಕ್ಷ ರೂ.ಗಳ ಬಿಡುಗಡೆಯಾಗಿವೆ ಎಂದು ವಿವರ ನೀಡಿದರು.

ಈ ವೇಳೆ ಪಪಂ ಅಧ್ಯಕ್ಷೆ ರಮೀಜಾಬಿ, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ಜೆಡಿಎಸ್ ಮುಖಂಡರಾದ ಬಿ.ಎಂ.ಬೈರೇಗೌಡ, ಎಸ್.ಎ.ವಿಜೇಂದ್ರ, ನೂರುಲ್ಲಾ, ಶಬ್ಬಿರ್‍ಅಹ್ಮದ್‍ಬೇಗ್, ಬಿ.ಎಂ.ಲೋಹಿತ್, ವಾಜೀದ್ ಹುಸೇನ್, ಸಚ್ಚಿನ್, ರತನ್‍ಶೆಟ್ಟಿ, ನಾಸೀರ್, ನೌಷದ್‍ ಅಹ್ಮದ್, ಬೆಟ್ಟಗೆರೆಮಂಜುನಾಥ್, ರಮೇಶ್, ಭಾರತೀಬೈಲ್ ಮಂಜುನಾಥ್, ಹೆಚ್.ಆಶೀಪ್ ಬಾಪುನಗರ, ಎ.ನದೀಮ್, ಆಶೀಫ್ ಪಿ.ಬಿ.ರಸ್ತೆ, ಪ.ಪಂ. ಮುಖ್ಯಾಧಿಕಾರಿ ಕಲಾವತಿ, ಪಿಡಬ್ಲ್ಯೂಡಿ ಜೆಇ ಜಯಸಿಂಗ್ ನಾಯಕ್ ಮತ್ತಿತರರಿದ್ದರು.

‘ಕೇಂದ್ರದ ಐಪಿಡಿಸಿ ಯೋಜನೆಯಡಿ 2.63 ಕೋಟಿ ಅನುಧಾನ ಬಿಡುಗಡೆಯಾಗಿದ್ದು, ಪಟ್ಟಣದ ಹಳೆಯ ವಿದ್ಯುತ್ ಲೈನ್‍ನ ಹಳೆ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸಿ ಹೊಸದಾಗಿ ಅಳವಡಿಸಲಾಗುತ್ತಿದೆ. ರಾಜ್ಯ ಸರ್ಕಾರದ ದೀನದಯಾಳ್ ಯೋಜನೆಯಡಿ 1.3 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ 1413 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಕೆಪಿಟಿಸಿಎಲ್ ಕಾಮಗಾರಿಗೆ 5 ಕೋಟಿ, ಕಳಸಕ್ಕೆ ಹೊಸ ವಿದ್ಯುತ್ ಲೈನ್ ಅಳವಡಿಸಲು 6.9ಕೋಟಿ, ಬಣಕಲ್‍ನಲ್ಲಿ ಹೊಸ ವಿದ್ಯುತ್ ಉಪಕೇಂದ್ರ ತೆರೆಯಲು 6.22 ಕೋಟಿ ಬಿಡುಗಡೆಯಾಗಿದೆ.

ಟೆಂಡರ್ ಪ್ರಕ್ರಿಯೆ ನಡೆದಿದೆ. ಜನ್ನಾಪುರ ಉಪವಿಭಾಗಕ್ಕೆ 4.50 ಹಾಗೂ 3.50 ಕೋಟಿ ಬಿಡುಗಡೆಗೊಂಡಿದ್ದರು ಜಾಗದ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದೆ. ಜನ್ನಾಪುರದಲ್ಲಿ ವಿದ್ಯಾಪೀಠಕ್ಕಾಗಿ 15 ಎಕ್ರೆ ಜಾಗ ಮೀಸಲಿರಿಸಿದ್ದು ಅದರಲ್ಲಿ ಆರು ಎಕ್ರೆ ಜಾಗವನ್ನು ಶಾಸಕರು ವಿದ್ಯುತ್ ಕೇಂದ್ರಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ ಮತ್ತು ವಿದ್ಯುತ್ ಎಕ್ಸ್ ಪ್ರೆಸ್ ಲೈನ್‍ಗೆ 25 ಕೋಟಿ ರೂ. ಬಿಡುಗಡೆಗೊಂಡಿದ್ದು ಟೆಂಡರ್ ಪ್ರಕ್ರಿಯೆ ಮುಂದುವರೆದಿದೆ’
-ರಾಜಶೇಖರ್, ಎಇಇ, ಮೆಸ್ಕಾಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News