ಕೊಳ್ಳೇಗಾಲ : ವಿವಿಧ ಕಾಮಗಾರಿಗೆ ಚಾಲನೆ
ಕೊಳ್ಳೇಗಾಲ,ಡಿ.7: ತಾಲ್ಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗೆ ಹನೂರು ಶಾಸಕ ಆರ್.ನರೇಂದ್ರ ಗುರುವಾರ ಚಾಲನೆ ನೀಡಿದರು.
ತಾಲ್ಲೂಕಿನ ಮಧ್ಯರಂಗನಾಥ ದೇವಾಲಯದ ಬಳಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಂದಾಜು 1 ಕೋಟಿ ವೆಚ್ಚದಲ್ಲಿ 8 ವಿಶ್ರಾಂತಿ ಕೊಠಡಿಗಳು ಹಾಗೂ ಗುಂಡೇಗಾಲ ಗ್ರಾಮದಲ್ಲಿ ಪಶುವೈದ್ಯ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಆರ್‍ಐಡಿಎಫ್ ಯೋಜನೆಯಡಿ ಅಂದಾಜು 22.60 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೇರೆವೇರಿಸಿದರು.
ನಂತರ ಮಾತನಾಡಿದ ಅವರು, ತಾಲ್ಲೂಕು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದು. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲಕ್ಕಾಗಿ ಕೊಠಡಿಗಳು ನಿರ್ಮಾಣ ಮಾಡಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ್ದ ಸರ್ಕಾರದಿಂದ ಅನುದಾನದಲ್ಲಿ ಹೆಚ್ಚುವರಿಯಾಗಿ 20 ಲಕ್ಷ ಹಣವನ್ನೂ ಬಿಡುಗಡೆಗೊಳಿಸುವ ಮೂಲಕ ಹೆಚ್ಚವರಿ 4 ಕೊಠಡಿ ನಿರ್ಮಾಣ ಮಾಡಿಸುವುದಾಗಿ ಭರವಸೆ ನೀಡಿದರು.
ಹೋಬಳಿ ಮಟ್ಟಗಳಲ್ಲಿ ಸರ್ಕಾರ ಪಶು ವೈದ್ಯಕೀಯ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮೂಲಕ ಜಾನುವಾರುಗಳಿಗೆ ರಕ್ಷಣೆ ಮುಂದಾಗಿದೆ ಎಂದರು.ಈ ಕಾಮಗಾರಿಗಳು ಯಾವುದೇ ರೀತಿಯಲ್ಲೂ ಕಳಪೆ ಕಾಮಗಾರಿಗೊಳಿಸದೆ ಗುಣಮಟ್ಟವಾಗಿ ನಿರ್ಮಾಣ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಿ ಎಂದರು. ಕಾಮಗಾರಿಯ ಸಂಧರ್ಭದಲ್ಲಿ ಸ್ಥಳೀಯರು ನಿಂತು ಪೂರ್ಣಗೊಳಿಸಲು ಸಹಕರಿಸಬೇಕೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯೆ ಜಯಂತಿ, ತಾ.ಪಂ ಅಧ್ಯಕ್ಷ ರಾಜು, ಸದಸ್ಯರಾದ ಅರುಣ್, ಸುರೇಶ್, ಭೂಸೇನಾ ಸಹಾಯಕ ನಿರ್ದೇಶಕ ಟಿ.ಸುರೇಶ್, ಪಶು ವೈದ್ಯಾಧಿಕಾರಿ ಡಾ.ವೆಂಕಟರಾಮ್, ಡಾ.ಶ್ರೀಕಾಂತ್, ಗ್ರಾ.ಪಂ ಅಧ್ಯಕ್ಷೆ ಮಂಜುಳಮೂರ್ತಿ, ಸದಸ್ಯರುಗಳಾದ ಪ್ರಕಾಶ್‍ನಾಯಕ, ಗುಂಡಪ್ಪ, ಎಸ್‍ಟಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಪಾಳ್ಯಕೃಷ್ಣ, ಮಾಜಿ ಜಿ.ಪಂ ಉಪಾಧ್ಯಕ್ಷ ಸೋಮಣ್ಣ, ಮುಖಂಡರುಗಳಾದ ಮಂಟೇಲಿಂಗು, ಮತೀನ್, ಶಿವಶಂಕರ್, ಯಡಕುರಿಯಾ ಮಹದೇವ, ಉಪವಿಭಾಗ ಕಛೇರಿಯ ಸುರೇಶ್, ರಾಮು, ಪುಟ್ಟು, ನಂಜುಂಡ ಹಾಗೂ ಗ್ರಾಮದ ಮುಖಂಡರಾಗಳು ಹಾಜರಿದ್ದರು.