×
Ad

ಇಬ್ಬರು ಹೆಣ್ಣುಮಕ್ಕಳೊಂದಿಗೆ ತಾಯಿ ನಾಪತ್ತೆ

Update: 2017-12-08 22:45 IST

ಶಿವಮೊಗ್ಗ, ಡಿ.8: ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿಯೋರ್ವಳು ಪತಿ ಮನೆಯಿಂದ ನಿಗೂಢವಾಗಿ ಕಾಣೆಯಾಗಿರುವ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಸಮೀಪದ ಕೆರೆಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಹಾಲಪ್ಪಎಂಬವರ ಪತ್ನಿ ಲೀಲಾವತಿ ಯಾನೆ ಬನಶಂಕರಿ(32), ಪುತ್ರಿಯರಾದ 2ನೇ ತರಗತಿ ಅಭ್ಯಾಸ ಮಾಡುತ್ತಿದ್ದ ಬಿಂದು(8) ಹಾಗೂ 1ನೇ ತರಗತಿಯಲ್ಲಿ ಓದುತ್ತಿದ್ದ ಸಂಜನಾ(6) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ.

ಮೂಲತಃ ಹಾನಗಲ್ ತಾಲೂಕು ಗೋಂಧಿ ಗ್ರಾಮದ ಲೀಲಾವತಿ ಅವರನ್ನು ಕಳೆದ 10 ವರ್ಷಗಳ ಹಿಂದೆ ಹಾಲಪ್ಪಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಪತಿಯೊಂದಿಗೆ ಗಲಾಟೆಯಾಗಿದ್ದು, ಇದರಿಂದ ಬೇಸತ್ತ ಲೀಲಾವತಿ ತವರುಮನೆಗೆ ಹಿಂದಿರುಗಿದ್ದಳು. ನಂತರ ಕುಟುಂಬದವರು ಸಂಧಾನ ನಡೆಸಿ ಮತ್ತೆ ಪತಿ ಮನೆಗೆ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಲೀಲಾವತಿಯು ತನ್ನಿಬ್ಬರು ಪುತ್ರಿಯರೊಂದಿಗೆ ಪತಿ ಮನೆಯಿಂದ ಕಣ್ಮರೆಯಾಗಿದ್ದಾರೆ. ಸಂಬಂಧಿಗಳು, ಪರಿಚಯಸ್ಥರ ಮನೆಗಳಲ್ಲಿ ಅವರ ಕುಟುಂಬದವರು ಶೋಧ ನಡೆಸಿದ್ದರೂ ಎಲ್ಲಿಯೂ ಅವರ ಸುಳಿವು ಲಭ್ಯ ವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಹೋದರ ಮಂಜುಾಥ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News