×
Ad

‘ಅನುದಾನದ ಕೊರತೆಯಿಂದ ಮುಚ್ಚುತ್ತಿರುವ ಕುಡಿಯುವ ನೀರಿನ ಘಟಕಗಳು’

Update: 2017-12-08 23:14 IST

ಸೊರಬ, ಡಿ.8: ಶುದ್ಧಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಗ್ರಾಮೀಣ ಭಾಗದ ಸಂಘ ಸಂಸ್ಥೆಗಳು ಅನುದಾನದ ಕೊರತೆ ಎದುರಿಸುತ್ತಿದ್ದು ಹಣವಿಲ್ಲದೆ ಅನೇಕ ಘಟಕಗಳು ಮುಚ್ಚಿ ಹೋಗುತ್ತಿವೆ ಎಂದು ಶಾಸಕ ಮಧುಬಂಗಾರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ.

 ತಾಲೂಕಿನ ಆನವಟ್ಟಿಯ ಎಪಿಎಂಸಿ ಆವರಣದಲ್ಲಿ 5.5ಲಕ್ಷ ರೂ. ವೆಚ್ಚದಲ್ಲಿ ಗಂಗಾ ಕಲ್ಯಾಣ ಯೋಜನೆ ಯಡಿ ನಿರ್ಮಿಸಿರುವ ಶುದ್ಧ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಪುಕ್ಕಟೆಯಾಗಿ ದೊರೆಯುವ ಯಾವುದೇ ವಸ್ತುಗೆ ಬೆಲೆಯಿರುವುದಿಲ್ಲ ಒಂದು ಲೀಟರ್ ಕುಡಿಯುವ ನೀರಿ ಗೆ 20ರೂ. ನೀಡಿ ಪಡೆಯುವ ಜನರಿಗೆ ಸರಕಾರ ಅನುಕೂಲಕ್ಕಾಗಿ ಯೋಜನೆಗಳನ್ನು ರೂಪಿಸಿದರೆ ನಿರ್ವಹಣೆಗಾಗಿ ತಗಲುವ ವೆಚ್ಚವನ್ನು ನೀಡಲು ಹಿಂದೇಟು ಹಾಕುತ್ತಾರೆ. ಎಪಿಎಂಸಿ ಸದ್ಯಸರು ನಿರ್ವಹಣಾ ವೆಚ್ಚವನ್ನು ನೋಡಿಕೊಂಡು ರೈತರ ಅನುಕೂಲಕ್ಕಾಗಿ ಕಡಿಮೆ ದರದಲ್ಲಿ ಕುಡಿಯುವ ನೀರು ಒದಗಿಸಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ರಾಜುಕುಪ್ಪ ಗಡ್ಡೆ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ವಿರೇಶ್ ಕೊಟಗಿ, ಎಪಿಎಂಸಿ ಉಪಾಧ್ಯಕ್ಷ ಜಯಶೀಲಗೌಡ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಸುರೇಶ ಹಾವಣ್ಣನವರ್, ಜಯಶೀಲಪ್ಪ, ದಯಾನಂದಗೌಡ, ಲೋಲಾಕ್ಷಮ್ಮ, ನಾಗರಾಜ ಹುರುಳಿ, ಸುರೇಶ ಸಮಸನವಳ್ಳಿ, ರಾಜುಗೌಡ, ನೀಲಕಂಠರಾಯ, ಕೆ.ಪಿ.ರುದ್ರಗೌಡ, ಬಸವಲಿಂಗಪ್ಪ, ಶಿವಕುಮಾರಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News