ಕಾರವಾರ: ಕಣ್ಮನ ಸೆಳೆದ ಫಲ ಪುಷ್ಪ ಪ್ರದರ್ಶನ

Update: 2017-12-08 18:00 GMT

 ಕಾರವಾರ, ಡಿ.8: ಕರಾವಳಿ ಉತ್ಸವದ ಪ್ರಯುಕ್ತ ವಾರಶಿಪ್ ಆವರಣದಲ್ಲಿ ಏರ್ಪಡಿಸಲಾದ ಫಲ ಪುಷ್ಪ ಪ್ರದರ್ಶನವು ನೋಡುಗರ ಕಣ್ಮನ ಸೆಳೆಯುತ್ತಿದ್ದು, ದೇಶಿಯ ಮತ್ತು ವಿದೇಶಿಯ ಹೂಗಳಿಂದ ನಿರ್ಮಿಸಿದ ಸುಖೋಯ್ ಯುದ್ಧ ವಿಮಾನ, ಸಜೀವ ಪ್ರಾಣಿಗಳನ್ನು ಹೋಲುವ ಜಿರಾಫೆ, ಜಿಂಕೆ, ಆನೆ, ಹೂವಿನಲ್ಲಿ ಮೈನೆಳೆದ ನವಿಲು ಹಾಗೂ ರಾಷ್ಟ್ರೀಯ ಪ್ರಾಣಿ ಹುಲಿಯು ಜೀವಂತವಾಗಿರುವ ಹಾಗೇಯೆ ನೋಡುಗರು ಆಕರ್ಷಿತರನ್ನಾಗಿ ಮಾಡಿದೆ.

ಇಂದು ಪ್ರದರ್ಶನದಲ್ಲಿ ವಿವಿಧ ಬಗೆಯ ಹಣ್ಣುಗಳಿಂದ ಬೆಂಗಳೂರಿನ ಭರತೇಶ ಕಲಾ ತಂಡದವರು ಪ್ರದರ್ಶನದಲ್ಲಿ ಖ್ಯಾತ ನಾಡಿನ ಹೆಮ್ಮೆಯ ರಾಷ್ಟ್ರ ಕವಿ ಕುವೆಂಪು, ವರಕವಿ ದ.ರಾ.ಬೇಂದ್ರೆ, ಗಿರಿಶ್ ಕಾರ್ನಾಡ್, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರಂತಹ ಪ್ರತಿಕೃತಿಗಳ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಕಿತ್ತೂರು ರಾಣಿಚೆನ್ನಮ್ಮಾ, ಲಾಲ್ ಬಹದ್ದೂರಶಾಸ್ತ್ರಿ, ಸುಭಾಶ್ಚಂದ್ರಬೋಸ್, ಭಗತ್‌ಸಿಂಗ್ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ, ಖ್ಯಾತ ಕ್ರಿಕೆಟಿಗ ಸಚಿನ ತೆಂಡೂಲ್ಕರ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಸೇರಿದಂತೆ ಖ್ಯಾತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ, ಇನ್ನಿತರ ಗಣ್ಯರ ಪ್ರತಿಕೃತಿಗಳು ಜನರಲ್ಲಿ ಕಣ್ಮನತಣಿಸುತ್ತಿವೆ.

 ವಿವಿಧ ಹಣ್ಣು ಹಂಪಲುಗಳು, ತರಕಾರಿ ಜೋಡಣೆಯ ಪ್ರತಿಕೃತಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಸುಮಾರು 5 ಸಾವಿರ ಕಾರ್ನೆಷಿಯನ್ ಹೂಗಳಿಂದ ನಿರ್ಮಿಸಿಲಾದ ಜಿರಾಫೆ ಪ್ರಾಣಿಯು ಹೂವಿನ ರೂಪದಲ್ಲಿ ಸೂಗಸಾಗಿದೆ. ಮೂರು ದಿನಗಳಕಾಲ ಪ್ರದರ್ಶನ ನಡೆಯಲಿದ್ದು ಮೊದಲ ದಿನ ಸಾವಿರಾರು ಜನರು ವೀಕ್ಷಿಸಿದರು. ಕಾರವಾರ ನೌಕಾನೆಲೆಯ ರಿಯಲ್ ಅಡ್ಮಿರಲ್ ಕೆ.ಜೆ.ಕುಮಾರ, ಜಿಪಂ ಮುಖ್ಯಕಾರ್ ನಿರ್ವಾಹಣಾಧಿಕಾರಿ ಎಲ್ ಚಂದ್ರಶೇಖರ ಪ್ರದರ್ಶನ ಉದ್ಛಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News