×
Ad

ಪಲಾನುಭವಿಗಳಿಗೆ ಕಾಮಗಾರಿ ಕಾರ್ಯಾದೇಶ ಪತ್ರವನ್ನು ವಿತರಣೆ

Update: 2017-12-09 17:42 IST

ಕೊಳ್ಳೇಗಾಲ,ಡಿ.9: ಹನೂರು ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಅಧಿಕಾರ ಅವಧಿಯಲ್ಲಿ ವಿವಿಧ ಯೋಜನೆಯಡಿ ಕ್ಷೇತ್ರವನ್ನು ಅಭಿವೃದ್ದಿದಾಗಿ ಸರ್ಕಾರದಿಂದ 4 ಕೋಟಿ ರೂ. ಅನುದಾನವನ್ನು ಬಳಸಲಾಗಿದೆ ಎಂದು ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರು ತಿಳಿಸಿದರು.

ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿ ಕಚೇರಿಯ ಆವರಣಲ್ಲಿ ಏರ್ಪಡಿಸಿದ್ದ 188 ವಸಂತಿ ಯೋಜನೆ ಪಲಾನುಭವಿಗಳಿಗೆ ಕಾಮಗಾರಿ ಕಾರ್ಯಾದೇಶ ಪತ್ರವನ್ನು ವಿತರಿಸಿ ಅವರು ಮಾತನಾಡಿದರು.

ಬಾ.ಬಾ ಸಾಹೇಬ ಡಾ.ಆರ್.ಅಂಬೇಡ್ಕರ್ ವಸಂತಿ ಯೋಜನೆಯಡಿ 26 ಪಿಎಂಎಜೆ ವಸತಿ ಯೋಜನೆಯಡಿ 100 ಹಾಗೂ ಬಸವ ವಸಂತಿ ಯೋಜನೆಯಡಿ 62 ಅರ್ಹಪಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಕಾರ್ಯಾದೇಶ ಪತ್ರವನ್ನು ಪಲಾನುಭವಿಗಳಿಗೆ  ನೀಡಲಾಗಿದೆ ಎಂದರು.

ಪಲಾನುಭವಿಗಳು 3 ತಿಂಗಳಲ್ಲಿ ಮನೆ ನಿರ್ಮಾಣ ಕಾರ್ಯವನ್ನು ಪೂರ್ವಗೊಳಿಸಬೇಕು ಅಲ್ಲದೆ ಪರಿಶಿಷ್ಟ ಪಂಗಡದವರು 2 ಲಕ್ಷ ರೂ ಹಾಗೂ ಸಾಮಾನ್ಯ ವರ್ಗದವರು 1.80 ಲಕ್ಷ ರೂ ಅನುದಾನವನ್ನು ಪಡೆದುಕೊಳ್ಳುವಂತೆ ಶಾಸಕರು ಸಲಹೆ ನೀಡಿದರು.

ಈ ಪಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ  ಅರಣ್ಯ ಇಲಾಖೆ ಮೂಲಕ ಎಸ್ಟಿ ಜನಾಂಗದವರಿಗೆ ಒಂದು ಸಾವಿರ ಗ್ಯಾಸ್ ಸಿಲಿಂಡರ್ ಹಂಚಲು ಚಂತನೆ ನಡೆಸಲಾಗಿದೆ ಎಂದ ಅವರು ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸಂತಿ ಸೌಲಭ್ಯ ಬಯಸುವವರು ಗ್ರಾಮ ಪಂಚಾಯತ್ ಗೆ ಅರ್ಜಿಯನ್ನು ನೀಡಿದಲ್ಲಿ ಹೆಚ್ಚುವರಿ ಮನೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಹಂಚಲಾಗುವುದು ಎಂದು ಗ್ರಾಮಸ್ಧರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಶಿವಮ್ಮಕೃಷ್ಣ, ತಾ.ಪಂ ಅಧ್ಯಕ್ಷ ಆರ್.ರಾಜು, ಗ್ರಾ.ಪಂ ಅಧ್ಯಕ್ಷ ಲೊಕೇಶ್, ಉಪಾಧ್ಯಕ್ಷ ಮಾದೇವಿ, ಗ್ರಾಮ ಪಂಚಾಯತ್  ಪಿಡಿಓ ಮರಿಸ್ವಾಮಿ, ಜಿಲ್ಯಾ ಕಾಂಗ್ರೆಸ್ ಎಸ್ಟಿ ವಿಭಾಗದ ಅಧ್ಯಕ್ಷ ಪಾಳ್ಯ ಕೃಷ್ಣ, ಇನ್ನೂ ಗ್ರಾಮದ ಮುಖಂಡರುಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News