ಸೂಳೆಕೆರೆಯಲ್ಲಿ ಕಾಣಿಸಿಕೊಂಡ ಅನೆ

Update: 2017-12-09 14:51 GMT

ಮಂಡ್ಯ, ಡಿ.9: ಮುತ್ತತ್ತಿ ಅರಣ್ಯದಿಂದ ಆಹಾರ ಅರಸಿ ಆನೆಯೊಂದು ಮದ್ದೂರು ತಾಲೂಕು ಮಾದರಹಳ್ಳಿ ಬಳಿಯ ಸೂಳೆಕೆರೆಯಲ್ಲಿ ಕಾಣಿಸಿಕೊಂಡಿದ್ದು, ಕಾಡಿಗೆ ಓಡಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಕೈಗೊಂಡಿದ್ದಾರೆ.

ಮುತ್ತತ್ತಿ ಕಾಡಿನಿಂದ ಆಹಾರ ಅರಸುತ್ತಾ ಕಬ್ಬಾಳು, ಹಲಗೂರು, ತೊರೆಬೊಮ್ಮನಹಳ್ಳಿ, ಮಠದದೊಡ್ಡಿ ಕ್ಯಾತಘಟ್ಟ, ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ ಮಾರ್ಗವಾಗಿ ಶುಕ್ರವಾರ ಸಂಜೆ ಮಾದರಹಳ್ಳಿ ತಲುಪಿರುವ ಆನೆಯನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳಾದ ಶಶಿಧರ್, ರವಿ ಹಾಗು ಕೆ.ಎಂ.ದೊಡ್ಡಿ ಸಿಪಿಐ ನವೀನ್, ಪಿಎಸ್ಸೈ ಅಯ್ಯನಗೌಡ ಮತ್ತು ಸಿಬ್ಬಂದಿ, ಆನೆ ಕಡೆಗೆ ಕಲ್ಲುತೂರುತ್ತಿದ್ದ ಗ್ರಾಮಸ್ಥರನ್ನು ದೂರ ಸರಿಸಿ, ಪ್ರಚೋದನೆ ನೀಡಬಾರದೆಂದು ಮನವಿ ಮಾಡಿದರು.

ಧ್ವನಿವರ್ಧಕದ ಮೂಲಕ ಆನೆ ಇರುವ ಕಡೆಗೆ ಸಾರ್ವಜನಿಕರು ತೆರಳಬಾರದೆಂದು ಪ್ರಚಾರ ಮಾಡಲಾಯಿತು. ನಂತರ, ರಾತ್ರಿಯೇ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News