×
Ad

ಮೇಲ್ದರ್ಜೆಗೇರಿದ ರೈಲು ನಿಲ್ದಾಣ ಜನವರಿ ಅಂತ್ಯಕ್ಕೆ ಲೋಕಾರ್ಪಣೆ

Update: 2017-12-09 23:36 IST

ತುಮಕೂರು,ಡಿ.09:ನಗರದ ರೈಲ್ವೆ ನಿಲ್ದಾಣ ಸುಮಾರು 15 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆರಿ ಉದ್ಘಾಟನೆಗೆ ಸಿದ್ದವಾಗಿರುವ ತುಮಕೂರು ರೈಲ್ವೆ ನಿಲ್ದಾಣಕ್ಕೆ ಶನಿವಾರ ಮಧ್ಯಾಹ್ನ ಸಂಸದ ಎಸ್.ಪಿ.ಮುದ್ದಹನುಮೇಗೌಡ,ಶಾಸಕರ ಡಾ.ರಫೀಕ್ ಅಹಮದ್ ಅವರೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ,ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ತುಮಕೂರು-ದಾವಣಗೆರೆ ಮತ್ತು ತುಮಕೂರು-ರಾಯದುರ್ಗ ಹೊಸ ರೈಲ್ವೆ ಹಳಿ ಕಾಮಗಾರಿ ಪ್ರಾರಂಭವಾಗಿದ್ದು,ನಗರಕ್ಕೆ ರೈಲಿನಲ್ಲಿ ಬಂದು ಹೋಗುವವರ ಸಂಖ್ಯೆ ಹೆಚ್ಚುವ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗು ವಂತೆ ಕೈಗೊಳ್ಳಬೇಕಾದ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರಲ್ಲದೆ,ರೈಲ್ವೇ ನಿಲ್ದಾಣ, ಶಾಂತಿನಗರ ಅಂಡರ್ ಪಾಸ್,ಬಡ್ಡಿಹಳ್ಳಿ ರೈಲ್ವೆ ಅಂಡರ್‍ಪಾಸ್, ಕ್ಯಾತ್ಸಂದ್ರಗಳಿಗೆ ಭೇಟಿ ನೀಡಿ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ಸಾರ್ವಜನಿಕರ ಅನುಕೂಲಕ್ಕೆ ಬೇಕಾದ ಅಗತ್ಯ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸುಮಾರು 15 ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿ ಪ್ಲಾಟ್‍ಫಾರಂ ನಿರ್ಮಾಣ ಮಾಡಿದ್ದು, ದಿನಕ್ಕೆ 10 ಸಾವಿರಕ್ಕೂ ಹೆಚ್ಚು ಜನರು 46 ರೈಲುಗಳ ಮೂಲಕ ಈ ನಿಲ್ದಾಣದ ಮೂಲಕ ಸಂಚರಿಸುತ್ತಾರೆ.ಬೆಂಗಳೂರಿಗೆ ಸುಮಾರು 1500 ಜನ ವಿವಿಧ ಕೆಲಸಗಳಿಗೆ ಹೋಗುವುದರಿಂದ ಮೂಲಭೂತ ಸೌಕರ್ಯಗಳ ಬೇಡಿಕೆ ಇದೆ.ಇವುಗಳನ್ನು ಈಡೇರಿಸಲು ಕೂಡಲೇ ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ಬಡ್ಡಿಹಳ್ಳಿ ಮತ್ತು ಮಂಜುನಾಥ್ ನಗರದ ನಡುವೆ ರೈಲ್ವೆ ಅಚಿಡರ್ ಪಾಸ್ ನಿರ್ಮಾಣಕ್ಕೆ ಜನರಿಂದ ಒತ್ತಡ ಬರುತ್ತಿದ್ದು, ಶೀಘ್ರವೇ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.ಈಗಾಗಲೇ ಉಪ್ಪಾರಹಳ್ಳಿ ಅಂಡರ್ ಪಾಸ್ ಕಾಮಗಾರಿ ಮುಕ್ತಾಯವಾಗಿದೆ.ಶಾಂತಿ ನಗರದ ಒಂದು ಭಾಗದ ಕೆಲಸ ನಡೆದಿದ್ದು,ಇನ್ರ್ನೆಂದು ಭಾಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ.ಈಗಾಗಲೇ ರೈಲ್ವೆ ಪ್ರಯಾಣಿಕರ ಸಂಘದ ಕೋರಿಕೆಯಂತೆ ಬೆಳಗ್ಗೆ 8.30ಕ್ಕೆ ಹೊರಡುತ್ತಿದ್ದ ರೈಲನ್ನು 8.15ಕ್ಕೆ ಹೊರಡಲು ವ್ಯವಸ್ಥೆ ಮಾಡಲಾಗಿದೆ. ತುಮಕೂರಿನಲ್ಲಿ ಹಾಲ್ಟ್ ರೈಲುಗಾಡಿಗೆ ಬೇಡಿಕೆ ಇದ್ದು,ಕೂಡಲೇ ಸಂಬಂಧಪಟ್ಟ ರೈಲ್ವೆ ಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸಲಾಗುವುದು ಎಂದು ಮುದ್ದಹನುಮೇಗೌಡ ತಿಳಿಸಿದರು.

ರೈಲ್ವೆ ಪೊಲೀಸರ ಕೊರತೆ ಇರುವ ಬಗ್ಗೆ ಅಧಿಕಾರಿಗಳು ನಮ್ಮ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಕುಡಿಯುವ ನೀರಿನ ಸಂಬಂಧ ನಗರಸಭೆಯಿಂದ ನಿರಂತರ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಶಾಸಕರು ಸೂಚನೆ ನೀಡಲಿದ್ದಾರೆ.ಈ ಎಲ್ಲಾ ಕಾಮಗಾರಿಗಳನ್ನು ಮುಗಿಸಿ 2018ರ ಜನವರಿ ಅಂತ್ಯಕ್ಕೆ ಮೇಲ್ದರ್ಜೆಗೇರಿದ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಸಂಸದರು ಸ್ಪಷ್ಟಪಡಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಡಾ.ರಫೀಕ್ ಅಹಮದ್,ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಜನರ ಸಂಖ್ಯೆ ಹೆಚ್ಚಿದ್ದು,ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು. ಹಾಗೆಯೇ ಎಲ್.38-39 ನಡುವೆ ಅಚಿಡರ್ ಪಾಸ್ ನಿರ್ಮಿಸುವ ಮೂಲಕ ತುಮಕೂರಿನ ಅರ್ಧದಷ್ಟು ಜನರಿಗೆ ತುಮಕೂರು ನಗರದ ಒಳ ಬರಲು ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ನಗರಪಾಲಿಕೆ ಸದಸ್ಯೆ ಗೀತಾ ರುದ್ರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋರಾಜು,ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News