×
Ad

ಕಾರು ಢಿಕ್ಕಿ: 5 ಕುರಿಗಳ ಸಾವು; ಬೈಕ್ ಸಾವಾರನಿಗೆ ಗಾಯ

Update: 2017-12-10 20:16 IST

ಶಿವಮೊಗ್ಗ, ಡಿ. 10: ದಟ್ಟ ಮಂಜು ಕವಿದ ವಾತಾವರಣದ ಕಾರಣದಿಂದ ನಿಯಂತ್ರಣ ಕಳೆದುಕೊಂಡ ಚಾಲಕನೋರ್ವ ಕಾರನ್ನು ರಸ್ತೆ ಬದಿ ಹೋಗುತ್ತಿದ್ದ ಕುರಿಗಳ ಹಿಂಡು ಹಾಗೂ ಬೈಕ್ ಸವಾರನ ಮೇಲೆ ಹರಿಸಿದ ಘಟನೆ ನಗರದ ಹೊರವಲಯ ಗಾಡಿಕೊಪ್ಪದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರವಿವಾರ ಮುಂಜಾನೆ ನಡೆದಿದೆ.

ಫೈರೋಜ್ ಎಂಬಾತನನ್ನು ಕಾರು ಚಾಲಕ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐದು ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವು ಕುರಿಗಳು ಗಾಯಗೊಂಡಿವೆ. ಉಳಿದಂತೆ ಬೈಕ್ ಸವಾರ ಕಿರಣ್ ಎಂಬುವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಸಂತೋಷ್‍ಕುಮಾರ್ ಮತ್ತವರ ಸಿಬ್ಬಂದಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಕಾರು ಚಾಲಕನ ವಿರುದ್ದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News