×
Ad

ಗಾಂಜಾ ಅಡ್ಡೆಗೆ ದಾಳಿ: ಮೂವರ ಬಂಧನ

Update: 2017-12-10 20:25 IST

ಶಿವಮೊಗ್ಗ, ಡಿ. 10: ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರಾಟ ಅಡ್ಡೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ, ಮೂವರನ್ನು ಬಂಧಿಸಿರುವ ಘಟನೆ ಜಿಲ್ಲೆಯ ತೀರ್ಥಹಳ್ಳೀ ಪಟ್ಟಣದ ಗಾಂಧಿನಗರದ ಬಳಿ ನಡೆದಿದೆ.

ಬೆಟ್ಟಮಕ್ಕಿಯ ನಿವಾಸಿ, ಗಾರೆ ಕೆಲಸ ಮಾಡುವ ರಸೂಲ್ (19), ಸೆಂಟ್ರಿಂಗ್ ಕೆಲಸ ಮಾಡುವ ಗಾಂಧಿನಗರದ ಅಬ್ದುಲ್ ಫರಾನ್ (26) ಹಾಗೂ ಇಂದಿರಾನಗರದ ನಿವಾಸಿ, ಕೋಳಿ ಅಂಗಡಿ ಮಾಲೀಕ ಅಂತೋಣಿ ಫರ್ನಾಂಡೀಸ್ (29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 310 ಗ್ರಾಂ ತೂಕದ 62 ಗಾಂಜಾ ಪ್ಯಾಕೇಟ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವುಗಳ ಮೌಲ್ಯ 12,400 ರೂ.ಗಳಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂವರು ಆರೋಪಿಗಳು ದಾದಾಪೀರ್ ಎಂಬಾತನಿಂದ 150 ರೂ.ಗೆ ಗಾಂಜಾ ಪೊಟ್ಟಣ ಖರೀದಿಸಿ, ಅದನ್ನು 200 ರೂ.ಗೆ ಯುವಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸಬ್ ಇನ್ಸ್‍ಪೆಕ್ಟರ್ ಭರತ್‍ಕುಮಾರ್‍ಗೆ ಖಚಿತ ಮಾಹಿತಿ ಲಭಿಸಿದ್ದು, ಆರೋಪಿಗಳು ಗಾಂಜಾ ಮಾರಾಟ ಮಾಡುವ ವೇಳೆಯೇ ದಾಳಿ ನಡೆಸಿ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News