ಇಸ್ಪೀಟ್ ಅಡ್ಡೆಯ ಮೇಲೆ ದಾಳಿ: 6 ಮಂದಿಯ ಬಂಧನ
Update: 2017-12-10 21:26 IST
ಕೊಳ್ಳೇಗಾಲ, ಡಿ. 10: ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿ 6 ಮಂದಿಯನ್ನು ಬಂಧಿಸುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕೆಂಪನಪಾಳ್ಯ ಗ್ರಾಮದ ಪ್ರಕಾಶ್, ಲಿಂಗರಾಜು, ಮಹೇಶ್, ಬಸವಣ್ಣ , ಮಹದೇವಸ್ವಾಮಿ, ಶ್ರೀನಿವಾಸ್ ಬಂದಿತ ಆರೋಪಿಗಳು.
ಕೆಂಪನಪಾಳ್ಯ ಗ್ರಾಮದ ಬಸವನ ಕಟ್ಟೆ ಏರಿಮೇಲೆ ಜೂಜಾಡುವುದಾಗಿ ತಿಳಿದು ಗ್ರಾಮಾಂತರ ಪೊಲೀಸ್ ಠಾಣೆ ಎಸ್‍ಐ ವಿ.ಸಿ.ವನರಾಜು ಸಿಬ್ಬಂದಿಗಳ ಜೊತೆ ತೆರಳಿ ದಾಳಿ ನಡೆಸಿ ಜೂಜಾಟಕ್ಕೆ ಇಟ್ಟಿದ್ದ 4,290 ರೂ ಹಣವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.