ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮಾಹಿತಿ ಸ್ಪಷ್ಟವಾಗಿರಲಿ: ಡಾ.ವಿಜಯಕುಮಾರ್
ಚಿಕ್ಕಮಗಳೂರು, ಡಿ.10: ಸಾಮಾಜಿಕ ಜಾಲತಾಣ ಗಳಲ್ಲಿ ಮಾಹಿತಿಯನ್ನು ಹಾಕುವ ಮುನ್ನ ಅವು ಸತ್ಯ ಮತ್ತು ಸತ್ಯಕ್ಕೆ ಹತ್ತಿರವಾಗಿರಬೇಕು. ಗೊಂದಲದಿಂದ ಕೂಡಿರದೆ, ಸ್ಪಷ್ಟತೆಯಿಂದಿರಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಕರೆ ನೀಡಿದ್ದಾರೆ. ರವಿವಾರ ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೆೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಕ್ಷದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ. ಸಂದೀಪ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪುಷ್ಪಲತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ. ಮಂಜೇಗೌಡ, ಗುಳ್ಳದಮನೆ ರಾಮಚಂದ್ರಪ್ಪಉಪಸ್ಥಿತರಿದ್ದರು. ಜಿಲ್ಲಾ ಐಟಿ ಸೆಲ್‌ನ ಅಧ್ಯಕ್ಷ ಕಾರ್ತಿಕ್.ಜಿ ಚೆಟ್ಟಿಯಾರ್ ಸ್ವಾಗತಿಸಿದರು. ಐಟಿ ಸೆಲ್‌ನ ಎಂ.ಕಿರಣ್ ವಂದಿಸಿದರು.
ಇಂದಿನ ತಂತ್ರಜ್ಞಾನ ಬದಲಾವಣೆಯಿಂದಾಗಿ ಕ್ಷಣ ಮಾತ್ರದಲ್ಲಿ ಯಾರನ್ನಾದರೂ ಸಂಪರ್ಕಿಸುವ ಅವಕಾಶ ದೊರೆತಿದೆ. ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕಾರ್ಯಕರ್ತರು ಪಕ್ಷಕ್ಕೆ ಪೂರಕವಾದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀಡಬೇಕು.
ಕೆ.ಮುಹಮ್ಮದ್, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ