×
Ad

ಗೌರವಾನ್ವಿತ ಬದುಕು ಪ್ರತಿಯೊಬ್ಬರ ಹಕ್ಕು: ಡಿಸಿ ಡಾ. ಲೋಕೇಶ್

Update: 2017-12-10 22:31 IST

ಶಿವಮೊಗ್ಗ, ಡಿ. 10: ಗೌರವಾನ್ವಿತವಾಗಿ ಬದುಕುವುದು ್ರತಿಯೊಬ್ಬರ ಹಕ್ಕಾಗಿದ್ದು, ಇನ್ನೊಬ್ಬರ ಮಾನವ ಹಕ್ಕುಗಳಿಗೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸು ವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ತಿಳಿಸಿದ್ದಾರೆ.

ಅವರು ರವಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೂಲಭೂತ ಹಕ್ಕುಗಳು ಆಯಾ ದೇಶಕ್ಕೆ ಮಾತ್ರ ಸೀಮಿತವಾಗಿದು, ಆದರೆ, ಮಾನವ ಹಕ್ಕುಗಳು ದೇಶಗಳ ಡಿ ಮೀರಿ ವಿಶ್ವವಾಪಿಯಾಗಿವೆ. ಆದರೆ, ಜಾತಿ, ಧರ್ಮ, ಭಾಷೆ, ಜನಾಂಗ, ವರ್ಣ, ವರ್ಗದ ಹೆಸರಿನಲ್ಲಿ ಈಗಲೂ ವಿಶ್ವದಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ಮನುಷ್ಯನಾಗಿ ಹುಟ್ಟಿದ ಬಳಿಕ ತಮ್ಮಲ್ಲಿರುವ ಪ್ರತಿಭೆಗಳನ್ನು ಬಳಸಿಕೊಂಡು ಗೌರವಾನ್ವಿತವಾಗಿ ಬದುಕು ಡೆಸಲು ಯಾರಿಗೂ ತೊಡಕುಂಟು ಮಾಡಬಾರದು ಎಂದರು.

ಮಾನವ ಹಕ್ಕುಗಳ ಉಲ್ಲಂಘನೆ ಕೇವಲ ಕಾಶ್ಮೀರ ಅಥವಾ ಫೆಲೆಸ್ತೀನ್‌ಗೆ ಮಾತ್ರ ಸೀಮಿತವಲ್ಲ. ನಿರ್ಲಕ್ಷ್ಯದಿಂದ ವಾಹನ ಲಾಯಿಸಿ ಅನಾಹುತಗಳಿಗೆ ಕಾರಣವಾಗುವುದು, ಆಸ್ಪತ್ರೆಯಲ್ಲಿ ಸರಿಯಾಗಿ ಔಷಧಿ ಲಭ್ಯವಿಲ್ಲದಿರುವುದು, ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಲಭ್ಯವಿಲ್ಲದಿರುವುದು ಎಲ್ಲವೂ ಮಾನವ ಹಕ್ಕು ಉಲ್ಲಂಘನೆ ವ್ಯಾಪ್ತಿಯಲ್ಲಿ ಬರುತ್ತವೆ. ಪ್ರತಿಯೊಬ್ಬರೂ ಉತ್ತಮವಾದ ಜೀವನ ಸಾಗಿಸಲು ಮಾನವ ಹಕ್ಕುಗಳ ಸಂರಕ್ಷಣೆ ಅಗತ್ಯವಿದೆ ಎಂದು ಅವರು ಹೇಳಿದರು.

‘ಮಾನವ ಹಕ್ಕುಗಳು 365’ ಎಂಬುವುದು ಈ ಬಾರಿಯ ಮಾನವ ಹಕ್ಕು ದಿನಾಚರಣೆಯ ಘೋಷಣೆಯಾಗಿದ್ದು, ವರ್ಷದ 365 ದಿನಗಳಲ್ಲೂ ಮಾನವ ಹಕ್ಕುಗಳ ರಕ್ಷಣೆಯಾಗುವಂತೆ ಕಾಪಾಡಬೇಕು ಎಂಬುದಾಗಿದೆ ಘೋಷನೆಯ ಉದ್ದೇಶ ಎಂದು ನುಡಿದರು.

ಸರಖಾರಿ ಕಚೇರಿಗಳಿಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರನ್ನು ಗೌರವಾನ್ವಿತವಾಗಿ ನಡೆಸಿಕೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಇನ್ನೊಬ್ಬರ ಹಕ್ಕುಗಳ ಉಲ್ಲಂಘನೆಯಾಗದಂತೆ, ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಬಿ. ಧರ್ಮ ಗೌಡರ್ ಮಾತನಾಡಿ, ಮನುಷ್ಯ ಪ್ರಾಣಿಗಳಂತೆ ಬದುಕಲು ಸಾಧ್ಯವಿಲ್ಲ. ಆತ ಗೌರವಾನ್ವಿತವಾಗಿ ಬದುಕಬೇಕಾಗಿದೆ. ಇದಕ್ಕಾಗಿ ಮಾನವ ಹಕ್ಕುಗಳನ್ನು ನಿಗದಿಪಡಿಸಲಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.

ಮಾನವ ಹಕ್ಕುಗಳ ಉಲ್ಲಂಘನೆ ನಮ್ಮ ಮನೆಯಿಂದಲೇ ಆರಂಭವಾಗಿ ವ್ಯಕ್ತಿ ಸಾಯುವ ವರೆಗೂ ಮುಂದುವರಿದಿರುತ್ತದೆ. ಹಕ್ಕುಗಳ ಉಲ್ಲಂಘನೆಯಾದಾಗ ನ್ಯಾಯಾಲಯಗಳ ಮೊರೆ ಹೋಗಿ ತಮ್ಮ ಹಕ್ಕುಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬಹುದಾಗಿದೆ. ಮಾನವ ಹಕ್ಕುಗಳ ರಕ್ಷಣೆಗೆ ಹಲವಾರು ಕಾಯ್ದೆ ಕಾನೂನುಗಳು ರಚನೆಗೊಂಡರೂ ಹಕ್ಕುಗಳ ಉಲ್ಲಂಘನೆ ಮುಂದುವರಿದಿರುವುದು ಕಳವಳಕಾರಿ ಎಂದು ಅವರು ಹೇಳಿದರು.

ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೂಲಿ ಕೆಲಸಕ್ಕೆ ಹಚ್ಚುವುದು, ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸರಿಯಾದ ಸೇವೆ ಒದಗಿಸದಿರುವುದು ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಬಾದಾಮಿ ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಮಾನವ ಹಕ್ಕು ಆಯೋಗದ ಅಡಿಷನಲ್ ರಿಜಿಸ್ಟ್ರಾರ್ ಬಿ.ಎಂ.ರಾಜು ಮಾತನಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News