ಸಮತೋಲನ ಆಹಾರದಿಂದ ಉತ್ತಮ ಆರೋಗ್ಯ: ಡಾ. ನಿರ್ಮಲಾ

Update: 2017-12-10 17:10 GMT

ಬಣಕಲ್, ಡಿ.10: ನೈಸರ್ಗಿಕವಾಗಿ ದೊರೆಯುವ ಪೌಷ್ಟಿಕ ಆಹಾರಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಕೊಟ್ಟಿಗೆಹಾರ ಅನ್ನಪೂರ್ಣೆಶ್ವರಿ ಕ್ಲಿನಿಕ್‌ನ ವೈದ್ಯೆ ಡಾ. ನಿರ್ಮಲ ಹೇಳಿದ್ದಾರೆ.

  ಅವರು ವಿದ್ಯಾಭಾರತಿ ಶಾಲೆಯಲ್ಲಿ ನಡೆದ ಪೋಷಕರಿಗಾಗಿ ಏರ್ಪಡಿಸಿದ್ದ ‘ಆರೋಗ್ಯದೆಡೆಗೆ ನಮ್ಮ ಅಡುಗೆ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಊಟ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಲವಣ ಮತ್ತು ಖನಿಜಾಂಶಗಳು ಹೆಚ್ಚಾಗಿರುವ ಸೊಪ್ಪು, ತರಕಾರಿಗಳು, ಮೊಳಕೆಕಾಳುಗಳನ್ನು ದಿನನಿತ್ಯದ ಆಹಾರದಲ್ಲಿ ಬಳಸಬೇಕು. ಸಾವಯವ ವಿಧಾನದಲ್ಲಿ ಬೆಳೆದ ತಾಜಾ ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಬಳಸಿ ಎಂದು ಅವರು, ನಾವು ಸೇವಿಸುವ ಆಹಾರ ದೇಹ ಮತ್ತು ಮಿದುಳಿನ ಚಟುವಟಿಕೆಯ ಮೇಲೆ ಪರಿಣಾಮ ಬೀರುವುದರಿಂದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕಿ ಮಾಲತಿ ಮಾತನಾಡಿ, ದೈಹಿಕವಾಗಿ ಹಾಗೂ ಮಾನಸೀಕವಾಗಿ ಆರೋಗ್ಯದಿಂದಿರಲು ಪೌಷ್ಟಿಕಾಂಶಯುಕ್ತ, ಸಾವಯವ ತರಕಾರಿಗಳ ಬಳಕೆ ಯಿಂದ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಸ್ಪರ್ಧೆಯಲ್ಲಿ ಪೋಷಕರು ಪರಿಸರದಲ್ಲಿ ದೊರಕುವ ಪದಾರ್ಥಗಳನ್ನು ಬಳಸಿ ಕೆಸುವಿನ ಪಲ್ಯ, ಕೊಸಂಬರಿ, ದಾಸವಾಳ ಎಲೆಯ ದೋಸೆ, ಒಂದೆಲಗ ಸೊಪ್ಪಿನ ಚಟ್ನಿ ಸೇರಿದಂತೆ ವಿಧವಿಧವಾದ ಅಡುಗೆ ಮಾಡಿದ್ದರು. 20 ಕ್ಕೂ ಹೆಚ್ಚು ಪೋಷಕರು ಅಡುಗೆ ಸ್ಪರ್ಧೆೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ವೈದ್ಯರಾದ ಡಾ.ಉಷಾ ಶೆಟ್ಟಿ ಬಣಕಲ್, ಡಾ.ಸುಶ್ಮಿತಾ ವೇಣೂರು, ಡಾ.ಶಿಲ್ಪ ಉಜಿರೆ, ಹಾಗೂ ಡಾ.ನಿರ್ಮಲ ಕೊಟ್ಟಿಗೆಹಾರ ಭಾಗವಹಿಸಿದ್ದರು.

  ಅಡುಗೆ ಸ್ಪರ್ಧೆಯಲ್ಲಿ ಸುಜನಾ ನಂದೀಶ್(ಪ್ರಥಮ), ಗೀತಾ ಮತ್ತು ಶಿಲ್ಪಾ (ದ್ವಿತೀಯ), ದೀಪಾ(ತೃತೀಯ), ಪ್ರತೀತಿ, ಶಕುಂತಲ ಮತ್ತು ವೀಣಾ(ಸಮಾಧಾನಕರ) ಸ್ಥಾನ ಪಡೆದರು. ಕಾರ್ಯಕ್ರಮದಲ್ಲಿ ಶಾಲಾಸಮಿತಿ ಅಧ್ಯಕ್ಷ ಶಿವರಾಮಶೆಟ್ಟಿ, ಉಪಾಧ್ಯಕ್ಷ ಸುಬ್ಬರಾಯಗೌಡ, ನಿರ್ದೇಶಕ ಬಿ.ಬಿ.ಮಂಜುನಾಥ್, ಖಜಾಂಚಿ ರಾಮ ಚಂದ್ರಹೊಳ್ಳ, ಕಾರ್ಯದರ್ಶಿ ಲಿಂಗಪ್ಪ, ಮುಖ್ಯಶಿಕ್ಷಕ ನಾಗರಾಜ್, ಶಿಕ್ಷಕರಾದ ಮನ ಮೋಹನ್, ವಸಂತ್, ಭಕ್ತೇಶ್, ಶೇಖರಪ್ಪ, ಲಿಂಗರಾಜು, ಆಶಾಸಂತೋಷ್, ಆತ್ಮಿಕ, ಸುನೀತ, ಕುಸುಮ ಶೆಟ್ಟಿ, ಕಮಲಮ್ಮ, ಗೀತ, ಹಾಗೂ ನಾಗೇಶ್, ಸುಧಾ ಪೋಷಕರಾದ ಪುಷ್ಪ, ಶಿಲ್ಪ, ಶಕುಂತಲಾ, ದೀಪಾ, ಕುಸುಮ, ಸುರೇಖಾ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News