ಕಾಂಗ್ರೆಸ್‌ನ ಸಾಧನೆಗಳೇ ಮುಂದಿನ ಚುನಾವಣೆಗೆ ಶ್ರೀರಕ್ಷೆ: ಮೀನಾಕ್ಷಿ

Update: 2017-12-10 17:21 GMT

ಚಳ್ಳಕೆರೆ, ಡಿ.10: ಜಿಲ್ಲೆಯ 6ವಿಧಾನಸಭೆ ಕ್ಷೇತ್ರಗಳಲ್ಲಿ ಚಳ್ಳಕೆರೆ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಗೆಲವು ಸಾಧಿಸಲು ಕೆಲವೇ ಅಂತರವಿದ್ದು ಎಲ್ಲಾ ಮಹಿಳಾ ಕಾರ್ಯಕರ್ತರು ಶ್ರಮಪಟ್ಟರೆ ಗೆಲವು ಸುಲಭವಾಗಲಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಬೆಂಗಳೂರು ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 60 ವರ್ಷಗಳು ಕಾಣದ ಅಭಿವೃದ್ಧಿ ಕೆಲಸಗಳು ಚಳ್ಳಕೆರೆ ನಗರದಲ್ಲಿ ಸಾರಿಗೆ ಬಸ್ ನಿಲ್ದಾಣ, ಸರಕಾರಿ ಇಂಜಿನಿಯರಿಂಗ್, ಕಾಲೇಜ್ ಮಹಿಳಾ,ಮಕ್ಕಳಆಸ್ಪತ್ರೆ, ಮುಖ್ಯರಸ್ತೆಗಳ ಅಗಲೀಕರಣ ಎಲ್ಲಾ ಸಮುದಾಯದವರಿಗೆ ಸಮುದಾಯಭವನ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಅಭಿವೃದ್ಧ್ದಿಕಾರ್ಯ ಮಾಡಿರುವುದರಿಂದ ಮುಂದಿನ ಚುನಾವಣೆಯಲ್ಲಿ ಗೆಲವು ಖಚಿತ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಿಕ್ಕೆ ಬಂದರೆ ಶಾಸಕ ಟಿ.ರಘುಮೂರ್ತಿ ಯವರು ಸಚಿವರಾಗುವುದು ಖಚಿತ ಎಂದರು.

 ತಾಲೂಕಿನ ತಳಕು ಹಾಗೂ ನಾಯಕನಹಟ್ಟಿ ಹೋಬಳಿಗಳು ಚಳ್ಳಕೆರೆ ತಾಲೂಕಿಗೆ ಸೇರಿದ್ದರೂ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರಕ್ಕೆ ಸೇರಿದ ಕಾರಣ ಎರಡು ಹೋಬಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗದೇ ಈ ಭಾಗಕ್ಕೆ ಶಾಸಕರು ಇಲ್ಲ ಎಂಬ ಭಾವನೆ ಇದ್ದು ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ ಎಂದ ಅವರು, ಚಳ್ಳಕರೆ ವಿಧಾನಸಭಾ ಕ್ಷೇತ್ರದ ಎಲ್ಲಾ ಮಹಿಳಾ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಟಿ.ರಘುಮೂರ್ತಿಯವರ ಅಭಿವೃದ್ಧಿ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಮುಂದಾಗಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಭಾಗ್ಯಮ್ಮ ಮಾತನಾಡಿ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ರಾಜಕೀಯ ಹಾಗೂ ಸರಕಾರಿ ಸೌಲಭ್ಯಗಳನ್ನು ಪಡೆಯಬೇಕಾದರೆ ಹೋರಾಟ,ಮನೋಬಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಮಹಿಳೆಯರು ಮುಂದೆ ಬರಲು ಸಾಧ್ಯ ಎಂದರು.

 ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಲಕ್ಷ್ಮೀದೇವಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಸದಸ್ಯೆ ಗೀತಾಬಾಯಿ, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ, ಜಯಲಕ್ಷ್ಮೀ, ಚಂದ್ರಮ್ಮ, ಆಶ್ರಯ ಸಮಿತಿ ಮಂಜುಳಮ್ಮ, ಮಾತನಾಡಿದರು. ಸಭೆಯಲ್ಲಿ ಒಭಮ್ಮ, ರಾಜಲಕ್ಷ್ಮೀ, ಜಮಾರಾವುನ್ನೀಸ, ನಾಗಲಕ್ಷ್ಮೀ, ಲೀಲಾವತಿ, ಜಿಲ್ಲಾ ಒಬಿಸಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ಪ್ರಸನ್ನ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪರೀದ್‌ಖಾನ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News