ರಂಗೋತ್ಸವ ನಾಡಿನ ವೈವಿಧ್ಯತೆಗೆ ಒತ್ತು ನೀಡಿದಂತೆ: ಹಾಲಪ್ಪ

Update: 2017-12-10 17:48 GMT

ಸೊರಬ, ಡಿ.10: ಯಾವುದೇ ಜನಾಂಗದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ನಾಡಿನ ವೈವಿಧ್ಯತೆಗೆ ಒತ್ತು ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸೊರಬ ರಂಗೋತ್ಸವ ಕಾರ್ಯಕ್ರಮ ಹೆಚ್ಚು ಮಹತ್ವ ಪಡೆದಿದೆ ಎಂದು ಮಾಜಿ ಸಚಿವ ಎಚ್. ಹಾಲಪ್ಪಹೇಳಿದ್ದಾರೆ.

ಪಟ್ಟಣದ ರಂಗಮಂದಿದಲ್ಲ್ಲಿ ಕಲಾಸುರಭಿ ಸಾಂಸ್ಕ ೃತಿಕ ವೇದಿಕೆ, ಶಿವಮೊಗ್ಗ ಕಲಾವಿದರ ಒಕ್ಕೂಟ ಹಾಗೂ ಶಿವಮೊಗ್ಗ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಂಗೋತ್ಸವ ಕಾರ್ಯಕ್ರಮಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವುದೇ ಜನಾಂಗದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ನಾಡಿನ ವೈವಿಧ್ಯತೆಗೆ ಒತ್ತು ನೀಡಿದಂತಾಗುತ್ತದೆ. ಕಾಲದ ಚಕ್ರದಲ್ಲಿ ಹಲವು ಕಲೆ, ಸಂಸ ್ಕೃತಿಗಳು ಅಳಿವಿನಂಚಿನಲ್ಲಿದ್ದು, ಮುಂದಿನ ತಲೆಮಾರಿಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವುದಕ್ಕಾಗಿಯಾದರೂ ಉಳಿಸಿಕೊಳ್ಳಬೇಕು. ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ನೀಡಲು ಹಾಗೂ ತಾಲೂಕಿನ ಜನರಿಗೆ ಕಲಾಸಕ್ತಿ ಬೆಳೆಸಲು ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ವ್ಯಕ್ತಿಯು ಹಲವು ಜಂಜಾಟಗಳಿಂದ ಹೊರ ಬರುವಲ್ಲಿ ಕಲಾ ಹಾಗೂ ಸಾಹಿತ್ಯಾಸಕ್ತಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಿದೆ ಎಂದರು.

ತಮ್ಮ ಅಧಿಕಾರಾವದಿಯಲ್ಲಿ ಪಟ್ಟಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಭವ್ಯ ರಂಗ ಮಂದಿರವನ್ನು ನಿರ್ಮಿಸಲಾಗಿದೆ. ಕಲಾವಿದರು ಹಾಗೂ ಸಾಹಿತ್ಯಾಸಕ್ತರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಬಳಸಿಕೊಳ್ಳಬೇಕು. ನಿರ್ಮಾಣದ ನಂತರದಲ್ಲಿ ಮೊದಲ ಬಾರಿಗೆ ಸಾಂಸ ್ಕೃತಿವಾಗಿ ಸೊರಬ ರಂಗೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ರಂಗ ಮಂದಿರಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುವಂತೆ ವೇದಿಕೆ ಪರದೆ, ವಿದ್ಯುತ್ ದೀಪಗಳ ಹಾಗೂ ಧ್ವನಿವರ್ಧಕಗಳ ವ್ಯವಸ್ಥೆ ಅಗತ್ಯವಿದೆ. ಕಾರ್ಯಕ್ರಮ ಆಯೋಜಕರೆ ಲೈಟಿಂಗ್ಸ್, ಧ್ವನಿವರ್ದಕ ಹಾಗೂ ವೇದಿಕೆ ನಿರ್ಮಾಣ ಮಾಡಿಕೊಳ್ಳುವುದು ಆರ್ಥಿಕ ಹೊರೆಯಾಗುತ್ತದೆ ಎಂಬುದನ್ನು ಅರಿಯಬೇಕಿದೆ. ರಂಗ ಮಂದಿರ ಪ್ರತಿಧ್ವನಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.

ರಂಗೋತ್ಸವದ ಅಧ್ಯಕ್ಷ ರಾಜಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಎಸ್.ಎಂ. ನೀಲೇಶ್, ರಂಗಬೆಳಕು ತಂಡದ ನಿರ್ದೇಶಕ ಕೊಟ್ರಪ್ಪ ಜಿ. ಹೀರೇಮಾಗಡಿ, ಉಪಾಧ್ಯಕ್ಷರಾದ ರವಿ ಕಲ್ಲಂಬಿ, ಬಿ. ಲಕ್ಷ್ಮಣಪ್ಪ ಪ್ರಧಾನ ಕಾರ್ಯದರ್ಶಿ ದೀಪಕ್ ಧೋಗಡೇಕರ್, ಷಣ್ಮುಖಾಚಾರ್, ಟಿ. ರಾಘವೇಂದ್ರ ಸೇರಿದಂತೆ ಕಲಾಸಕ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News