ಹೊಟೇಲ್ ಉದ್ಯಮದಿಂದ ಜನರಿಗೆ ಆಹಾರ ಕೊಟ್ಟ ಸಂತೃಪ್ತಿ: ನಾಗೇಂದ್ರ

Update: 2017-12-10 17:58 GMT

ಸಾಗರ, ಡಿ.10: ಹೊಟೇಲ್ ಉದ್ಯಮ ಸವಾಲಿನ ಕೆಲಸವಾದರೂ, ಈ ಉದ್ಯಮ ನಡೆಸುವವರಿಗೆ ಜನರಿಗೆ ಆಹಾರ ಕೊಟ್ಟ ಸಂತೃಪ್ತಿ ಇರುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಾಗೇಂದ್ರ ಐತಾಳ್ ಹೇಳಿದ್ದಾರೆ.

ಇಲ್ಲಿನ ಪ್ರಾಂತ್ಯ ಹೊಟೇಲ್ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸಂಘವು ಪ್ರಕಟಿಸಿದ 2018ನೇ ಸಾಲಿನ ದಿನವಹಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನೀವು ಜನರಿಗೆ ಅಮೃತವನ್ನು ಕೊಡುತ್ತಿದ್ದೀರಿ. ಜನರು ಸಹ ನಿಮ್ಮನ್ನು ಹರಸಿ ಹೋಗುತ್ತಾರೆ. ಹಣ ಕೊಡುತ್ತಾರೆ, ಆದರೆ ಜನರ ಹಸಿವನ್ನು ನೀಗಿಸುವ ನಿಮ್ಮ ಕೆಲಸ ದೇವರು ಮೆಚ್ಚುವಂತಹದ್ದಾಗಿದೆ ಎಂದ ಅವರು, ನಿಮ್ಮ ಉದ್ಯಮಕ್ಕೆ ಬ್ಯಾಂಕ್ ವತಿಯಿಂದ ಸದಾ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಬದಲಾದ ದಿನಮಾನಕ್ಕೆ ತಕ್ಕಂತೆ ಹೋಟೆಲ್ ಉದ್ಯಮವು ಅನೇಕ ಆಧುನಿಕ ಬೆಳವಣಿಗೆಯನ್ನು ಕಾಣುತ್ತಿದೆ. ಅತ್ಯಂತ ಚಿಕ್ಕ ಸ್ಥಳದಲ್ಲಿ ಶುಚಿರುಚಿಯಾದ ಆಹಾರ ಪದಾರ್ಥವನ್ನು ನೀಡುವ ಹೋಟೆಲ್‌ಗಳು ನಿರ್ಮಾಣವಾಗುತ್ತಿದೆ.

ಇದರಿಂದ ಗ್ರಾಹಕರು ನೇರವಾಗಿ ನೀವು ಯಾವ ರೀತಿ ಆಹಾರ ಪದಾರ್ಥ ತಯಾರಿಸುತ್ತಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಕೇಂದ್ರ ಸಮಿತಿ ನಿರ್ದೇಶಕ ಎಚ್.ಎನ್. ಉಮೇಶ್, ಉಪಾಧ್ಯಕ್ಷ ಎಂ. ನಾಗರಾಜ್, ಕಾಳಿಂಗರಾವ್, ವಿನೋದ್ ನಾಯಕ್, ಶ್ರೀನಿವಾಸ್ ಶೆಟ್ಟಿ, ಮಹೇಂದ್ರ ಶೆಟ್ಟಿ, ಗಂಗಾಧರ್, ಕುಮಾರ್ ಇನ್ನಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News