ಕಾಲುಜಾರಿ ಕೆರೆಗೆ ಬಿದ್ದ ಮಹಿಳೆ ಸಾವು

Update: 2017-12-10 18:25 GMT

ನಾಗಮಂಗಲ, ಡಿ.10: ಬಟ್ಟೆ ತೊಳೆಯುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದಲ್ಲಿರುವ ಮೊದಲಹಳ್ಳಿ ಕೆರೆಯಲ್ಲಿ ರವಿವಾರ ನಡೆದಿದೆ.

ಪಟ್ಟಣದ ಸುಭಾಷ್ ನಗರದ ನಿವಾಸಿ ಮುನ್ನಾ ಎಂಬವರ ಪತ್ನಿ ಹಸೀನಾ (38) ಎಂಬ ಮಹಿಳೆಯೇ ಸಾವನ್ನಪ್ಪಿರುವ ದುರ್ದೈವಿ. ಈಕೆ ಮಧ್ಯಾಹ್ನ ಮುಳುಕಟ್ಟೆ ರಸ್ತೆಯಲ್ಲಿ ಬರುವ ಮೊದಲಹಳ್ಳಿ ಕೆರೆಯ ತಡದಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಈ ಬಗ್ಗೆ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News