ಟ್ರಂಪ್ ನಿರ್ಧಾರಕ್ಕೆ ಬೆಂಬಲವಿಲ್ಲ: ಇಸ್ರೇಲ್‌ಗೆ ಐರೋಪ್ಯ ಒಕ್ಕೂಟ

Update: 2017-12-11 16:45 GMT

ಬ್ರಸೆಲ್ಸ್ (ಬೆಲ್ಜಿಯಂ), ಡಿ. 11: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾದರಿಯನ್ನು ಅನುಸರಿಸಿ, ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಐರೋಪ್ಯ ಒಕ್ಕೂಟವನ್ನು ಒತ್ತಾಯಿಸಿದ್ದಾರೆ.

ಆದರೆ, ಐರೋಪ್ಯ ಒಕ್ಕೂಟದ ನಾಯಕರು ಟ್ರಂಪ್ ನಿಲುವಿಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ರ ನಿರ್ಧಾರವು ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ತರಲಿದೆ, ಯಾಕೆಂದರೆ ‘‘ವಾಸ್ತವವನ್ನು ಅಂಗೀಕರಿಸುವುದು ಶಾಂತಿಗೆ ಮೂಲವಾಗಿದೆ’’ ಎಂದು ಬ್ರಸೆಲ್ಸ್‌ನಲ್ಲಿ ನಡೆಯುತ್ತಿರುವ ಐರೋಪ್ಯ ಒಕ್ಕೂಟದ ವಿದೇಶ ಸಚಿವರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ನೆತನ್ಯಾಹು ಹೇಳಿದರು.

ಆದರೆ, ಝೆಕ್ ರಿಪಬ್ಲಿಕ್ ಮುಂತಾದ ಇಸ್ರೇಲ್‌ನ ಅತ್ಯಂತ ಆಪ್ತ ಐರೋಪ್ಯ ದೇಶಗಳೂ, ಟ್ರಂಪ್ ನಿರ್ಧಾರ ವಲಯದಲ್ಲಿನ ಶಾಂತಿ ಪ್ರಕ್ರಿಯೆಗೆ ಮಾರಕ ಎಂಬುದಾಗಿ ಎಚ್ಚರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News