ಮದುವೆ ದಿಬ್ಬಣದ ವಾಹನಕ್ಕೆ ಬಸ್ ಢಿಕ್ಕಿ: 10 ಮಂದಿಗೆ ಗಾಯ
Update: 2017-12-13 16:11 IST
ಗದಗ, ಡಿ.13: ಮದುವೆ ದಿಬ್ಬಣಕ್ಕೆ ಹೊರಟಿದ್ದ ಟಾಟಾ ಏಸ್ ವಾಹನಕ್ಕೆ ಹಿಂಬದಿಯಿಂದ ಸರ್ಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ನಲ್ಲಿದ್ದ 10 ಮಂದಿ ಗಾಯಗೊಂಡ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಗೋಜನೂರು ಬಳಿ ಇಂದು ನಡೆದಿದೆ.
ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಂಡರಗಿ ತಾಲೂಕಿನ ಪೇಟಾಲೂರ ನಿಂದ ಶಿಗ್ಗಾವ್ ಗೆ ಮದುವೆಗೆಂದು ಟಾಟಾ ಏಸ್ ವಾಹನ ಮೂಲಕ ಹೊರಟಿರುವ ವೇಳೆ ಈ ಅಪಘಾತ ಸಂಭವಿಸಿದೆ.
ಗಂಭೀರ ಗಾಯಕ್ಕೊಳಗಾಗಿರುವವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇತರ ಗಾಯಾಳುಗಳನ್ನು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಗದಗ ಜಿಲ್ಲೆ ಲಕ್ಷೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.