ರೈಲಿಗೆ ಸಿಲುಕಿ ವ್ಯಕ್ತಿ ಸಾವು

Update: 2017-12-13 13:35 GMT

ಶಿವಮೊಗ್ಗ,ಡಿ.13: ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ನಗರದ ಹೊರವಲಯ ಪಿಅಂಡ್‍ಟಿ ಕಾಲೋನಿ ಸಮೀಪ ವರದಿಯಾಗಿದೆ. 

ಮೃತ ವ್ಯಕ್ತಿಯ ಹೆಸರು,ವಿಳಾಸ ಸೇರಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೃತರು 5.5 ಅಡಿ ಎತ್ತರವಿದ್ದು, ಸುಮಾರು 40 ರಿಂದ 45 ರ ವರ್ಷವಿದೆ. ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ ಹೊಂದಿದ್ದಾರೆ. ಈ ಸಂಬಂದ ಶಿವಮೊಗ್ಗದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News