2018ರ ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ

Update: 2017-12-13 14:11 GMT
ಸಾಂದರ್ಭಿಕ ಚಿತ್ರ

ಬೆಂಗಳೂರು,ಡಿ.13: 2018ರ ಮಾರ್ಚ್ 1ರಿಂದ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು, 17ರಂದು ಪರೀಕ್ಷೆ ಮುಗಿಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2018ರ ಮಾರ್ಚ್ 1ರಂದು(ಗುರುವಾರ) ಅರ್ಥಶಾಸ್ತ್ರ, ಭೌತಶಾಸ್ತ್ರ, ಮಾ.2ಕ್ಕೆ (ಶುಕ್ರವಾರ) ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋ ಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‌ನೆಸ್, ಮಾ.3ಕ್ಕೆ(ಶನಿವಾರ) ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ.

ಮಾ.5ಕ್ಕೆ(ಸೋಮವಾರ) ವ್ಯವಹಾರ ಅಧ್ಯಯನ, ಜೀವಶಾಸ್ತ್ರ, ಮಾ.6ಕ್ಕೆ (ಮಂಗಳವಾರ) ಉರ್ದು, ಸಂಸ್ಕೃತ, ಮಾ.7ಕ್ಕೆ ರಾಜ್ಯಶಾಸ್ತ್ರ, ಭೂಗರ್ಭಶಾಸ್ತ್ರ, ಮಾ.8ಕ್ಕೆ (ಗುರುವಾರ) ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ, ಮಾ.9ಕ್ಕೆ(ಶುಕ್ರವಾರ) ತರ್ಕಶಾಸ್ತ್ರ, ಶಿಕ್ಷಣ, ಗೃಹ ವಿಜ್ಞಾನ, ಮಾ.10ಕ್ಕೆ(ಶನಿವಾರ) ಇತಿಹಾಸ, ಸಂಖ್ಯಾಶಾಸ್ತ್ರ.

ಮಾ.12ಕ್ಕೆ(ಸೋಮವಾರ) ಸಮಾಜಶಾಸ್ತ್ರ, ಗಣಿತ, ಬೇಸಿಕ್ ಮ್ಯಾಥ್ಸ್, ಮಾ.13ಕ್ಕೆ (ಮಂಗಳವಾರ) ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಮಾ.14ಕ್ಕೆ(ಬುಧವಾರ) ಕನ್ನಡ, ಮಾ.15ಕ್ಕೆ(ಗುರುವಾರ) ಹಿಂದಿ, ಮಾ.16ಕ್ಕೆ (ಶುಕ್ರವಾರ) ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್, ಮಾ.17ಕ್ಕೆ(ಶನಿವಾರ) ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯಲಿದೆ.

ಮೇಲ್ಕಂಡ ಎಲ್ಲ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ.ಶಿಖಾ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News