ಶಿರಸಿ ಹಿಂಸಾಚಾರ ಹಿನ್ನೆಲೆ: ಸಂಘ ಪರಿವಾರದ 71 ಮಂದಿಯ ಮೇಲೆ ಪ್ರಕರಣ ದಾಖಲು

Update: 2017-12-13 15:42 GMT

62 ಮಂದಿಯ ಮೇಲೆ 307 ಕೇಸ್, ದಾರವಾಡ ಜೈಲಿಗೆ ರವಾನೆ

ಶಿರಸಿ ಸಂಪೂರ್ಣ ತಹ ಬದಿಗೆ

ಬುಧವಾರದಿಂದ ಆರಂಭಗೊಂಡ ವ್ಯಾಪಾರ ವಹಿವಾಟು

 ಶಿರಸಿ, ಡಿ.13: ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನು ಖಂಡಿಸಿ ಮಂಗಳವಾರ ಸಂಘಪರಿವಾರ ಕರೆ ನೀಡಿದ್ದ ಬಂದ್‌ನ ವೇಳೆ ನಡೆದ ಹಿಂಸಾಚಾರದಿಂದಾಗಿ ಉದ್ವಿಗ್ನ ಗೊಂಡಿದ್ದ ಶಿರಸಿ ಸಂಜೆಯ ವೇಳೆ ಶಾಂತಿಯ ಕಡೆಗೆ ತಿರುಗಿದೆ. ಶಾಂತಿ ನೆಲೆಸಿದ್ದರೂ ಆತಂಕದೊಂದಿಗೆ ಜನಸಂಚಾರ ವಿರಗತಿಯಲ್ಲಿ ಸಾಗಿತ್ತು. ಆದರೆ, ಬುಧವಾರ ಶಿರಸಿ ಸಂಪೂರ್ಣ ತಹಬದಿಗೆ ಬಂದಿದ್ದು, ಎಂದಿನಂತೆ ವ್ಯಾಪಾರ ವಹಿವಾಟುಗಳು ಆರಂಭ ಗೊಂಡಿತು.

71 ಮಂದಿಯ ಮೇಲೆ ಪ್ರಕರಣ:

ಪರೇಶ್ ಮೇಸ್ತಾ ನಿಗೂಢ ಸಾವು ಖಂಡಿಸಿ ಸಂಘಪರಿವಾರ ಕರೆ ನೀಡಿದ್ದ ಶಿರಸಿ ಬಂದ್ ವೇಳೆ ಸಂಘಪರಿವಾರ ನಡೆಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 71 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಕರಣ ಸಂಬಂಧ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಸೇರಿ ಪ್ರಮುಖ 9 ಜನರ ಮೇಲೆ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ್ದಾರೆ.

ಅಲ್ಲದೆ, ಕಲ್ಲು ತೂರಾಟ ಹಾಗೂ ಅಂಗಡಿ ದ್ವಂಸಗೊಳಿಸಿದ ಆರೋಪದ ಮೇಲೆ ಬಂಧಿಸಿ. 62 ಮಂದಿಯ ಮೇಲೆ 307 ಪ್ರಕರಣ ದಾಖಲಿಸಿರುವ ಪೊಲೀಸರು, ಧಾರವಾಡ ಕಾರಾಗೃಹದಲ್ಲಿಸರಿಸಿದ್ದಾರೆ ಎಂದು ತಿಳಿದಿ ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News