ಸಾಲ ಬಾಧೆ: ರೈತ ಆತ್ಮಹತ್ಯೆ
Update: 2017-12-14 22:28 IST
ಚಿಕ್ಕಮಗಳೂರು, ಡಿ.14: ಸಾಲದ ಬಾದೆ ತಾಳಲಾರದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಟನೆ ಸಿಂಗಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿ.ಎಂ. ಕೊಪ್ಪಲು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಮರುಳಸಿದ್ದಪ್ಪ(63) ಎಂದು ಗುರುತಿಸಲಾಗಿದೆ. ಇವರು ತಮ್ಮ ಜಮೀನು ಅಭಿವೃದ್ಧಿ ದೃಷ್ಟಿಯಿಂದ ಹಾಗೂ ನೀರಾವರಿಗಾಗಿ ಬೋರ್‌ವೆಲ್ ಕೊರೆಸಲು ವಿಎಸ್‌ಎಸ್‌ಎನ್ ಬ್ಯಾಂಕಿನಲ್ಲಿ 1 ಲಕ್ಷ ರೂ. ಸಹಿತ ಪರಿಚಿತರಿಂದ ಸುಮಾರು 3 ಲಕ್ಷ ರೂ. ವರೆಗೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ನಡುವೆ ಸೊಸೆಯ ಹೆರಿಗೆ ವೇಳೆ ಸುಮಾರು 3.50 ಲಕ್ಷ ರೂ. ಖರ್ಚು ಮಾಡಿದ್ದರು. ಇದೆಲ್ಲದರ ಸಾಲದಿಂದ ಜೀವನ ಸಾಗಿಸುವುದು ದುಸ್ತರ ಎನ್ನಿಸಿ ಸಕಾಲದಲ್ಲಿ ಬಾರದ ಬೆಳೆಯನ್ನು ಕಂಡು ಮನನೊಂದು ಮನೆಯ ಪಕ್ಕದ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.