ಆಡಂಬರದ ಮದುವೆಗಿಂತ ವಿದ್ಯಾದಾನ ಮೇಲು

Update: 2017-12-14 17:13 GMT

ಚಳ್ಳಕೆರೆ, ಡಿ.14: ಕೋಟಿಕೋಟಿ ರೂ. ಖರ್ಚು ಮಾಡಿ ಆಡಂಬರ ಮದುವೆಯಾಗುವ ಬದಲು ಬಡ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಮಠಗಳಿಗೆ ಹಾಗೂ ಸಮಾಜದ ಪರವಾಗಿ ಕೆಲಸ ಮಾಡುವ ಸಂಘಸಂಸ್ಥೆಗಳಿಗೆ ನೀಡಿದರೆ ಬಡವರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪ್ರತಿಷ್ಠೆಗಾಗಿ ಮದುವೆ ಬೇಡ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದ್ದಾರೆ.

ಶಾಂತಿನಗರದ ಮೈದಾನವೊಂದರಲ್ಲಿ ಆಯೋಜಿಸಿದ್ದ ರೆಡ್ಡಿ ಸಮುದಾಯದ ವೇಮನಾಥ ಶ್ರೀಗಳ ಕಾರು ಚಾಲಕ ಸ್ವಾಮಿ-ನವ್ಯ ಅವರ ಸರಳ ವಿವಾಹ ಕಲ್ಯಾಣೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಪೂರ್ವಜರ ಕಾಲದಲ್ಲಿ ಮನೆಗಳ ಮುಂದೆ ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದರೂ ಖರ್ಚು ಕಡಿಮೆಯಾಗುತ್ತಿತ್ತು. ನಂತರ ನಗರದಲ್ಲಿರುವ ಕಲ್ಯಾಣ ಮಂಟದಲ್ಲಿ ಮಾಡಲು ಮುಂದಾದರು. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಬಡವರಿಗೆ ನೆರವಾಗಲು ರೆಡ್ಡಿ ಹಾಗೂ ಗಾಣಿಗ ಸಮುದಾಯ ಮುಂದಾಗುವಂತೆ ತಿಳಿಸಿದರು.

ಬಸವಕುಮಾರಸ್ವಾಮಿ ನವದಂಪತಿಗೆ ಆರ್ಶೀವಚನ ನೀಡಿ ಮಾತನಾಡಿ, ಕೋಟಿಕೋಟಿ ಹಣ ಖರ್ಚು ಮಾಡಿ ಮದುವೆಯಾದರೂ ದೇವರ ಸಾನಿಧ್ಯದಲ್ಲಿ ದೇವರ ಹಾಗೂ ಮಠಾಧೀಶರ ಆರ್ಶೀವಾದ ಸಿಗುವುದಿಲ್ಲ. ಆದರೆ ಸಾಮೂಹಿಕ ಹಾಗೂ ಸರಳ ವಿವಾಹದಲ್ಲಿ ಮಠಾಧೀಶರ ಆರ್ಶೀರ್ವಾದ ಸಿಗಲಿದೆ. ಆಡಂಬರ ಶ್ರೀಮಂತಿಕೆಯನ್ನು ಪ್ರದದರ್ಶಿಸುವುದು ಪ್ರತಿಷ್ಠೆಯ ಸಂಕೇತವಾಗಿದೆ. ಮದುವೆಗಾಗಿ ಮನೆ, ಆಸ್ತಿ, ಸಾಲ ಮಾಡಲಾಗುತ್ತಿದೆ. ಮೊದಲು ಇದು ನಿಲ್ಲಬೇಕು ಎಂದರು.

ಸರಳ ವಿವಾಹದ ಕಲ್ಯಾಣೋತ್ಸವ ಕಾರ್ಯಕ್ರಮ ರೆಡ್ಡಿ ಹಾಗೂ ಗಾಣಿಗ-ಲಿಂಗಾಯತ ಸಮುದಾಯದ ಗುರು ವೇಮನಾಥ ಶ್ರೀ ನೇತೃತ್ವದಲ್ಲಿ ನಡೆಯಿತು. ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿದರು.

 ಮಾದರ ಚನ್ನಯ್ಯ ಸ್ವಾಮೀಜಿ, ಮುಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಪೂರ್ಣನಂದ ಸ್ವಾಮಿ, ಯಾದವನಂದ ಸ್ವಾಮಿ, ಬಸವನಾಗಿ ಸ್ವಾಮಿ, ಪ್ರಸನ್ನನಂದ ವಾಲ್ಮೀಕಿ ಸ್ವಾಮಿ, ಶಾಂತವೀರ ಸ್ವಾಮಿ, ಆರ್ಯರೇಣುಕಾಚಾರ್ಯ ಸ್ವಾಮಿ, ವೇಮನಂದ ಸ್ವಾಮಿ, ತಿಪ್ಪೇರುದ್ರ ಸ್ವಾಮಿ, ಮಹಾಂತ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದರು.

ಇಲ್ಲಿ ಸರಳವಿವಾಹ ಕಾರ್ಯಕ್ರಮದಲ್ಲಿ ಯಾವುದೇ ವಾದ್ಯಗೋಷ್ಠಿಗಳಿರಲಿಲ್ಲ , ಗದ್ದಲ, ಗಲಾಟೆ, ಓಡಾಟ ಆಡಂಬರವಿಲ್ಲದೆ ವಿವಿಧ ಮಠಾಧೀಶರ ವಚನಗಳು, ನವದಂಪತಿಗೆ ವಿಭೂತಿ, ರುದ್ರಾಕ್ಷಿ, ಪುಷ್ಪಾರ್ಚನೆ ಮಾಡುವ ಮೂಲಕ ನವದಂಪತಿಗೆ ಆಶೀರ್ವಚನ ನೀಡಿದರು.

ರಾಜ್ಯ ರೆಡ್ಡಿ ಸಮುದಾಯದ ಸಂಘದ ಶೇಖರ್ ರೆಡ್ಡಿ, ನಾಗರಾಜ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಇತರರು ಪಾಲ್ಗೊಂಡಿದ್ದರು.

ಹಣವುಳ್ಳವರು ಪ್ರತಿಷ್ಠೆಗಾಗಿ ಅರಮನೆ ಮೈದಾನ ಸೇರಿದಂತೆ ಕೋಟಿ ಕೋಟಿ ರೂ. ಖರ್ಚು ಮಾಡಿ ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಂದುವೆಚ್ಚದ ಆಡಂಬರ ಮದುವೆಗಳನ್ನು ಬಿಟ್ಟು ಸರಳ ವಿವಾಹಗಳನ್ನು ಏರ್ಪಡಿಸಬಹುದು.

 ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News