ಉತ್ತಮ ಗಿಡಗಳಿಂದ ಉತ್ತಮ ಬೆಳೆ ಸಾಧ್ಯ: ಡಾ.ವಸಂತ ಕುಮಾರ್

Update: 2017-12-14 17:24 GMT

ಮೂಡಿಗೆರೆ, ಡಿ.14: ಯವುದೇ ಬೆಳೆಗಳಿಗೂ ವಾತಾವರಣಕ್ಕೆ ತಕ್ಕಂತೆ ಸಮಗ್ರ ನೀರು ಮತ್ತು ಪೋಷಕಾಂಶಗಳನ್ನು ನೀಡುವುದರಿಂದ ಉತ್ತಮ ಗಿಡಗಳಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯ ವಾಗುತ್ತದೆ ಎಂದು ಕೃಷಿ ವಿಜ್ಞಾನ ವೇದಿಕೆ ಸಂಸ್ಥಾಪಕ ಮೈಸೂರಿನ ಡಾ.ವಸಂತ ಕುಮಾರ್ ತಿಳಿಸಿದ್ದಾರೆ.

ಅವರು ಗುರುವಾರ ಲಯನ್ಸ್ ಮತ್ತು ಲಯನಸ್ ಸಂಸ್ಥೆಯ 40ನೇ ವರ್ಷದ ವಾರ್ಷಿಕೋತ್ಸವ ಅಂಗ ವಾಗಿ ತಾಲೂಕಿನ ಗೌತಹಳ್ಳಿಯ ಲಕ್ಷ್ಮಣ್‌ಗೌಡ ತೋಟದಲ್ಲಿ ನಡೆದ ಕಾಳು ಮೆಣಸು ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹು ಬೆಳೆಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಬಹುದು. ಈ ಹಿಂದೆ ಕಾಫಿ ಬೆಳೆ ಅತೀ ಮುಖ್ಯವಾಗಿದ್ದು, ಮೆಣಸನ್ನು ಎರಡನೆೀ ದರ್ಜೆಯ ಬೆಳೆಯಾಗಿ ನೋಡುತ್ತಿದ್ದರು. ಆದರೆ ಇಂದು ಕಾಳು ಮೆಣಸು ಪ್ರಮುಖ ಬೆಳೆಯಾಗಿದ್ದು, ಬೆಳೆಗಾರರನ್ನು ಆರ್ಥಿಕ ವಾಗಿ ಸದೃಢಗೊಳಿಸಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೋಟದ ಮನೆ ಲಕ್ಷ್ಮಣ್‌ಗೌಡ ಮಾತನಾಡಿ, ನಿರಂತರ ಪರಿಶ್ರಮದಿಂದ ವೈಜ್ಞಾನಿಕವಾಗಿ ಬೆಳೆ ಬೆಳೆದರೆ ರೈತರು ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಜಿಲ್ಲಾ ರಾಜ್ಯಪಾಲ ಎಚ್.ಆರ್.ಹರೀಶ್, ತಾಲೂಕು ಅಧ್ಯಕ್ಷ ಜೆಎನ್‌ಜೆ ಲೋಬೋ, ಕಾರ್ಯದರ್ಶಿ ಎಂ.ಬಿ.ಗೋಪಾಲ್‌ಗೌಡ, ಮಾಜಿ ಅಧ್ಯಕ್ಷ ಚಂದ್ರಕಾಂತ್, ಬೆಳೆಗಾರರಾದ ಗೌತಹಳ್ಳಿ ಲಕ್ಷ್ಮಣ್‌ಗೌಡ, ಎನ್.ಎಲ್.ಸುಂದರೇಶ್ವರ್, ಪ್ರಣತಿ ಪ್ರದೀಪ್, ಹಳೆಕೋಟೆ ರಮೇಶ್, ಡಿ.ಎಲ್.ಲಕ್ಷ್ಮಣ್‌ಗೌಡ, ಮಂಚೆೀಗೌಡ, ಎಂ.ಸಿ.ನಾಗೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News