ಅಧ್ಯಾತ್ಮದಲ್ಲಿ ಜ್ಞಾನದ ಬೆಳಕು ಕಾಣಬಹುದು: ಗುಣನಾಥ ಸ್ವಾಮೀಜಿ

Update: 2017-12-14 17:30 GMT

 ಚಿಕ್ಕಮಗಳೂರು, ಡಿ.14: ಮನುಷ್ಯನು ಧ್ಯಾನ, ಅಧ್ಯಾತ್ಮದ ಮೂಲಕ ಜ್ಞಾನದಲ್ಲಿ ಉನ್ನತಿಯನು,್ನ ಬದುಕಲ್ಲಿ ಯಶಸ್ಸನ್ನು ಕಾಣಬಹುದು ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದ್ದಾರೆ. ಅವರು ಗುರುವಾರ ನಗರದ ಬಿಜಿಎಸ್ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ 88ನೇ ಮಾಸಿಕ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲಾ ಮಕ್ಕಳಿಗೆ ಉಪನ್ಯಾಸ ನೀಡಿ ದರು. ಅಧ್ಯಾತ್ಮದ ಮೂಲಕ ಅವಲೋಕನ ಎಂಬ ವಿಷಯದ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದ ಶ್ರೀಗಳು, ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೇ ಹೆಚ್ಚಾಗಿ ಧ್ಯಾನಗಳಲ್ಲಿ ತೊಡಗುವುದರಿಂದ ಮನುಷ್ಯನಲ್ಲಿನ ಕೋಪ, ಅಸೂಯೇ, ದ್ವೇಷದಂತಹ ಕೆಟ್ಟ ಗುಣಗಳು ನಾಶವಾಗಿ ಸದ್ಗುಣಗಳು ಆವರಿಸಿಕೊಳ್ಳುತ್ತವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ರೀಡಾಕೂಟದಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತ್ತು. ಅತಿಥಿಗಳಾಗಿ ಹಿರಿಯ ಪತ್ರಕರ್ತ ಗಿರಿ ಜಾಶಂಕರ್, ಸಾಹಿತಿ ಕುಂದೂರು ಆಶೋಕ್, ಬಿಜಿಎಸ್ ಕಾಲೇಜ್ ಪ್ರಾಂಶುಪಾಲ ಸುರೇಂದ್ರ, ಮುಖ್ಯ ಶಿಕ್ಷಕ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News