×
Ad

ಕಾರು ಢಿಕ್ಕಿ: ಮೂವರಿಗೆ ಗಾಯ

Update: 2017-12-15 17:44 IST

ಚಿಕ್ಕಮಗಳೂರು, ಡಿ.15: ಬೈಕ್ ಸವಾರರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಜಿಪಂ ಸದಸ್ಯೆ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಅಜ್ಜಂಪುರ ತಾಲೂಕಿನ ಕಲ್ಲಹಳ್ಳಿ ಬಳಿ ನಡೆದಿದೆ.

  ಅವಘಡದಲ್ಲಿ ಜಿಪಂ ಸದಸ್ಯೆ ಅನುಸೂಯ ಗೋಪಿಕೃಷ್ಣ ಮತ್ತು ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬೈಕ್ ಸವಾರರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಲಿಂಗದಹಳ್ಳಿ ಜಿಪಂ ಸದಸ್ಯೆ ಅನುಸೂಯ ಗೋಪಿಕೃಷ್ಣರವರು ಹುಣಸಘಟ್ಟದಿಂದ ಶಿವನಿ ಕಡೆಗೆ ಚಲಿಸುತತಿದ್ದಾಗ ವೇಗವಾ ಬಂದ ಬೈಕ್ ಡಿಕ್ಕಿ ಹೊಡೆಯುವ ಹಂತದಲ್ಲಿತ್ತು. ಈ ವೇಳೆ ಕಾರು ಚಾಲಕ ಬೈಕ್‍ನಿಂದ ತಪ್ಪಿಸಲು ರಸ್ತೆ ಬದಿಗೆ ತಿರುಗಿಸಿದ್ದರಿಂದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ ಜಿಪಂ ಸದಸ್ಯೆ ಅನುಸೂಯರವರ ಕಾಲಿಗೆ ಗಾಯವಾಗಿದೆ. ಅವರು ತರೀಕೆರೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸವಾರರ ನಿಯಂತ್ರಣ ತಪ್ಪಿ ಬೈಕ್ ರಸ್ತೆಯಲ್ಲಿ ಮಗುಚಿ ಬಿದ್ದಿದ್ದರಿಂದ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದಾರೆ. ಘಟನೆ ಕುರಿತು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News