×
Ad

ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ: ಇಬ್ಬರು ಮೃತ್ಯು

Update: 2017-12-15 18:36 IST

ದಾವಣಗೆರೆ, ಡಿ. 15: ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಹಿನ್ನಲೆಯಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಗಂಗನಕಟ್ಟೆ ಗ್ರಾಮದ ಬಳಿ ಕಳೆದ ತಡರಾತ್ರಿ ನಡೆದಿದೆ.

ಹೆಬ್ಬಾಳು ಗ್ರಾಮದ ಹೊಸ ಬಡಾವಣೆಯ ತಿಪ್ಪೇಶ್ ನಾಯ್ಕ (40) ಮತ್ತು ಬಸವರಾಜ್(22) ಮೃತ ಮೃತಪಟ್ಟವರು. ಗುರುವಾರ ಮಧ್ಯರಾತ್ರಿ ಗಂಗನಕಟ್ಟೆ ಸಮೀಪದ ಕೆರೆಯೊಂದರಿಂದ ಮರಳು ತುಂಬಿಕೊಂಡು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. 

ಮರಳು ತುಂಬಿದ್ದ ಟ್ರ್ಯಾಲಿ ಮೇಲೆ ಮಲಗಿದ್ದ ತಿಪ್ಪೇಶ್ ನಾಯ್ಕ ಮತ್ತು ಬಸವರಾಜ್ ಟ್ರ್ಯಾಲಿ ಪಲ್ಟಿಯಾದಾಗ ಮರಳಲ್ಲಿ ಹೂತುಹೋಗಿ ಮರಳಿನಿಂದ ಹೊರಬರಲಾಗದೇ ಉಸಿರುಗಟ್ಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದರಿಂದ ಗಾಬರಿಗೊಂಡ ಟ್ರ್ಯಾಕ್ಟರ್ ಚಾಲಕ ಎಂಜಿನನ್ನು ಟ್ರ್ಯಾಲಿಯಿಂದ ಬೇರ್ಪಡಿಸಿಕೊಂಡು ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. 

ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೆರೆ, ಹಳ್ಳ, ಪಟ್ಟಾ ಜಮೀನುಗಳಿಂದ ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News