ಕೋರ್ಟ್ ಆದೇಶ ಜಾರಿಗೆ ಒತ್ತಾಯಿಸಿ ಧರಣಿ
ಮಂಡ್ಯ, ಡಿ.15: ವಡ್ಡರ್, ಲಮಾಣಿ, ಕೊರಚರ ಮತ್‍ಉ ಕೊರವರ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿರುವುದನ್ನು ಹೈಕೋರ್ಟ್ ರದ್ದುಪಡಿಸಿದ್ದು, ಕೂಡಲೇ ಕೋರ್ಟ್ ಆದೇಶ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದರು ಧರಣಿ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಮತ್ತು ಜೆಡಿಎಸ್ ಹಾಗು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
1980ರ ಮುಖ್ಯಮಂತ್ರಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರಾಕರ ಒಬಿಸಿ ಜಾತಿಗಳಾದ ಲಮಾಣಿ, ವಡ್ಡರ, ಕೊರಚರ, ಕೊರವರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ ಅಸ್ಪøಶ್ಯ ಜನಾಂಗ ರಾಜಕೀಯ, ಆರ್ಥಿಕ, ನಾಗರಿಕ ಸೇವೆಗಳಿಂದ ವಂಚಿತರನ್ನಾಗಿ ಮಾಡಿತು ಎಂದು ಅವರು ಆರೋಪಿಸಿದರು.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಡ್ಡರ, ಲಮಾಣಿ, ಕೊರಚರ, ಕರವರ ಜನಾಂಗವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿರುವುದು ಸಂವಿಧಾನ ವಿರೋಧಿಯಾಗಿದೆಯೆಂದು ನವೆಂಬರ್ 12 2002 ರಲ್ಲಿ ಹೈಕೋಟ್ ರದ್ದುಪಡಿಸಿ ಆದೇಶ ಹೊರಡಿಸಿದೆ. ಆದರೆ, ಕೋರ್ಟ್ ಆದೇಶವನ್ನು ಇದುವರೆಗೂ ಜಾರಿಗೊಳಿಸಿಲ್ಲ ಎಂದು ಧರಣಿನಿರತರು ದೂರಿದರು.
ಸ್ಪರ್ಶ ಜಾತಿಗಳಾದ ವಡ್ಡರ್, ಲಮಾಣಿ, ಕೊರಚರ, ಕೊರವರ ಜನಾಂಗವನ್ನು ರಕ್ಷಣೆ ಮಾಡುವುದಕ್ಕೋಸ್ಕರ ನ್ಯಾ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುತ್ತಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ ಜತೆಗೆ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸಿವೆ ಎಂದೂ ಅವರು ಆಪಾದಿಸಿದರು.
ಸರಕಾರದ ಕ್ರಮದಿಂದ ಅಸ್ಪøಶ್ಯರು ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸರಕಾರಿ ಉದ್ಯೋಗ, ಸಮಾಜಿಕವಾಗಿ ವಂಚನೆಗೊಳಗಾಗುತ್ತಿದ್ದು, ಕೂಡಲೇ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಿ ರಕ್ಷಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಸಿ.ಎಂ.ಕೃಷ್ಣ, ಹನಕೆರೆ ಶ್ರೀಕಂಠ, ಪ್ರವೀಣ್‍ಕುಮಾರ್, ನವೀನ್, ರಾಜೇಶ್, ಸೋಮಶೇಖರ್, ಕಾರ್ತಿಕ್, ಕೇಶವಮೂರ್ತಿ, ಅನಿಲ್‍ಕುಮಾರ್, ಇತರರು ಧರಣಿಯಲ್ಲಿ ಭಾಗವಹಿಸಿದ್ದರು.