ಕೊಳ್ಳೇಗಾಲ : ತ್ರೈಮಾಸಿಕ ಪ್ರಗತಿ, ಪರಿಶೀಲನಾ ಸಭೆ
ಕೊಳ್ಳೇಗಾಲ,ಡಿ.16: ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಪ್ರಗತಿ, ಪರಿಶೀಲನಾ ಸಭೆಯು ತಾ.ಪಂ ಅಧ್ಯಕ್ಷ ರಾಜು ಅಧ್ಯಕ್ಷತೆಯಲ್ಲಿ ನಡೆಯಿತು.
ನಂತರ ಮಾತನಾಡಿದ ಅವರು, ಸಭೆಗೆ ಹಲವು ಅಧಿಕಾರಿಗಳು ಗೈರು ಹಾಜರಾಗಿದ್ದಾರೆ ಇದಕ್ಕೆ ಕಾರಣ ಕೇಳಿ ಅವರಿಗೆ ನೋಟಿಸ್ ನೀಡಲಾಗುವುದು ಎಂದ ಅವರು ಅಧಿಕಾರಿಗಳು ಸಭೆಗಳಿಗೆ ಹಾಜರಾಗದೆ ಕೇಳ ಹಂತದ ಅಧಿಕಾರಿಗಳನ್ನು ಕಳುಹಿಸುತ್ತಿದ್ದಾರೆ. ಇದು ಸರಿಯಲ್ಲ ಮುಂದಿನ ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಬೇಕು ಎಂದು ತಾಕೀತು ಮಾಡಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಮಾತನಾಡಿ, ಅಂಗನವಾಡಿಯ ಮಾತೃಪೂರ್ಣ ಯೋಜನೆ ಸರಿಯಾದ ರೀತಿಯಲ್ಲಿ ನಡೆಯುತಿಲ್ಲ ಮತ್ತು ಅಂಗನವಾಡಿಯಲ್ಲಿ ಮಕ್ಕಳನ್ನು ಆಶಾ ಕಾರ್ಯಕರ್ತರು ಸರಿಯಾದ ರೀತಿ ನೋಡಿಕೊಳ್ಳುತ್ತಿಲ್ಲ. ಇವರ ಬಗ್ಗೆಯು ಗಮನಹರಿಸಿ. ಅಧಿಕಾರಿಗಳು ಅಂಗನವಾಡಿಗಳಿಗೆ ಬೇಟಿ ನೀಡಿ ಪರೀಶಿಲನೆ ನಡೆಸಬೇಕು. ಅಂಗನವಾಡಿ ಆಶಾಕಾರ್ಯಕರ್ತರನ್ನು ಪ್ರತಿ 3 ತಿಂಗಳಿಗೂಮ್ಮೆ ಅವರನ್ನು ಕರೆದು ಅಂಗನವಾಡಿಯ ಕುಂದು ಕೂರತೆಯನ್ನು ತಿಳಿದುಕೊಳ್ಳಬೇಕು ಎಂದರು.
ಆಹಾರ ಇಲಾಖೆ ಅವರು ಜನರಿಗೆ ಸರಿಯಾದ ರೀತಿಯಲ್ಲಿ ಅಕ್ಕಿ, ಹಾಗೂ ಬೇಳೆಕಾಳು ಅನ್ನು ನೀಡುತಿಲ್ಲ. ತಿಂಗಳಿಗೆ 3 ದಿನ ಮಾತ್ರ ಅಂಗಡಿ ತೆಗೆಯುತ್ತಿದ್ದಿರಾ. ಜನರಿಗೆ ನೀವು ತಿಂಗಳ ಪೂರ್ತಿ ಅಂಗಡಿಯನ್ನು ತೆಗೆದು ಅಕ್ಕಿ ನೀಡಬೇಕು ಹಾಗೂ ನೀವು ಅವರಿಂದ ಹಣ ವಸೂಲಿ ಮಾಡುತ್ತಿದ್ದಿರಾ ಎಂದು ಆರೋಪ ಕೇಳಿಬರುತ್ತಿದೆ ಕೂಡಲೇ ನೀವು ಎಚ್ಚೆತ್ತುಕೊಳ್ಳಿ ಎಂದರು.
ತಾ.ಪಂ ಅಧ್ಯಕ್ಷ ರಾಜು ಮಾತನಾಡಿ, ಆಹಾರ ಇಲಾಖೆಯ ಅಧಿಕಾರಿ ಬಿಸಿಲಯ್ಯ ಮಾತನಾಡಿ ತಾಲ್ಲೂಕಿನಲ್ಲಿ ಸುಮಾರು 13,419 ಪಡಿತರ ಚೀಟಿಗೆ ಹೂಸದಾಗಿ ಅರ್ಜಿಯನ್ನು ಹಾಕಿದ್ದರು ಅದರಲ್ಲಿ ಸುಮಾರು 8980 ಪಡಿತರ ಚೀಟಿಯನ್ನು ನೀಡಿದ್ದೆವೆ ಹಾಗೂ 7828 ಅನಿಲ ಭಾಗ್ಯ ಯೋಜನೆಗೆ ಅರ್ಜಿಯನ್ನು ಹಾಕಿದ್ದಾರೆ. ಪಾಲಾನುಭಾವಿಗಳನ್ನು ಗುರುತಿಸಿ ಮುಖ್ಯಮಂತ್ರಿಗಳ ಕೈಯಲ್ಲಿ ಹಸ್ತಾಂತರ ನೀಡುತ್ತೇವೆ ಎಂದರು.
ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಲತಾರಾಜಣ್ಣ, ಇಒ ಡಾ.ಪ್ರಕಾಶ್ ಹಾಗೂ ಅಧಿಕಾರಿಗಳಾದ ಗಂಗಾಧರ್, ನಾಗೇಶ್, ಲಿಂಗರಾಜು, ಸಿದ್ದಪ್ಪಜಿಗೌಡ, ಶಿವಲಿಂಗಯ್ಯ, ಗುರುಸ್ವಾಮಿ, ಪ್ರತಾಪ್, ಹನುಮಮ್ ಶೆಟ್ಟಿ ಉಪಸ್ಥಿತರಿದ್ದರು.