​ಸರಗಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ

Update: 2017-12-16 17:01 GMT

ಮಡಿಕೇರಿ,ಡಿ.16 :ಮಾದಾಪುರ ಜಂಬೂರು ಗ್ರಾಮದಲ್ಲಿ ನಡೆದ ಜಂಬೂರು ಗ್ರಾಮದ ಪೌತಿ ಕುಟ್ಟಪ್ಪನವರ ಪತ್ನಿಯಾದ ಚಿಣ್ಣವ್ವ ಎಂಬುವರ ಸರಗಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಆರೋಪಿಗಳನ್ನು ಬಂಧಿಸುವಲ್ಲಿ  ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾದಾಪುರದ ಸೂರ್ಲಬ್ಬಿ ಗ್ರಾಮದ ನಿವಾಸಿಗಳಾದ ಮುದ್ದಂಡ ಎಂ. ಭೀಮಯ್ಯ ಹಾಗೂ ಮುದ್ದಂಡ ಬಿ. ಕಾರ್ಯಪ್ಪ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. 
ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರ, ಉಂಜಿಗನಹಳ್ಳಿ ಹಾಗೂ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕಬೆಟಗೇರಿಯಲ್ಲಿ 3 ಮನೆಗಳ್ಳತನ,  ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಡವನಾಡು, ಬಜೆಗುಂಡಿ, ಜಂಬೂರಿನಲ್ಲಿ 3 ಸರಗಳ್ಳತನ ಹಾಗೂ ಇಗ್ಗೊಡ್ಲು ಗ್ರಾಮದ ಸೀತಮ್ಮ ರವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ.ರಾಜೇಂದ್ರಪ್ರಸಾದ್ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡ ಮಡಿಕೇರಿ ಡಿ.ಸಿ.ಐ.ಬಿ., ವಿಭಾಗದ ಆರಕ್ಷಕ ನಿರೀಕ್ಷಕರಾದ ಎಂ.ಮಹೇಶ, ಶನಿವಾರಸಂತೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಹೆಚ್.ಎಂ. ಮರಿಸ್ವಾಮಿ, ಸೋಮವಾರಪೇಟೆ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಎಂ. ಶಿವಣ, ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಆರಕ್ಷಕ ಉಪನಿರೀಕ್ಷಕರಾದ ಪಿ. ಜಗದೀಶ ಹಾಗೂ ಸೋಮವಾರಪೇಟೆ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ದಯಾನಂದ, ಸಜಿ, ಪ್ರಕಾಶ, ಸಂದೇಶ, ಜೋಸೆಫ್, ಉದಯ, ಸುಧೀಶ, ಮುಸ್ತಾಫ, ಸುರೇಶ, ಪ್ರದೀಪ, ಹರೀಶ, ಪರಮೇಶ, ಮಂಜು, ಕುಮಾರಸ್ವಾಮಿ, ಅನಂತ, ಸ್ವಾಮಿ ಮತ್ತು  ಡಿಸಿಐಬಿ ಸಿಬ್ಬಂದಿಯಾದ ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಎಸ್‍ಪಿ ರಾಜೇಂದ್ರಪ್ರಸಾದ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News