×
Ad

ಕಾರು ಮತ್ತು ಜೀಪ್ ಮುಖಾಮುಖಿ ಢಿಕ್ಕಿ : ಐವರಿಗೆ ಗಾಯ

Update: 2017-12-17 20:30 IST

ಕೊಳ್ಳೇಗಾಲ, ಡಿ.17: ಕಾರು ಮತ್ತು ಜೀಪ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದವರಿಗೆ ಗಾಯವಾಗಿರುವ ಘಟನೆ ತಾಲ್ಲೂಕಿನ ಧನಗೆರೆ ಬಳಿಯ ಕೊಳ್ಳೇಗಾಲ ಬೆಂಗಳೂರು ಮುಖ್ಯರಸ್ತೆಯಲ್ಲಿ ಜರುಗಿದೆ.

ಬೆಂಗಳೂರಿನ ಮೂಲದ ರಾಜಪ್ಪ, ರೇವಣ್ಣ, ಮಂಜು, ಮಲ್ಲಿಕಾರ್ಜುನ, ಕುಮಾರ ಎಂಬುವವರು ಗಾಯಾಳಗಳು.

ಬೆಂಗಳೂರಿನಿಂದ ಬರುತ್ತಿದ್ದ ಕಾರು ಕೊಳ್ಳೇಗಾಲದ ಕಡೆಯಿಂದ ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಜೀಪ್‍ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರಿಗೆ ಕಾಲು, ಕೈ, ಮುಖ ಸೇರಿದಂತೆ ಇನ್ನಿತರರ ಭಾಗಗಳಲ್ಲಿ ಗಾಯವಾಗಿದ್ದು, ಗಾಯಾಳುಗಳಿಗೆ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮೈಸೂರಿನ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.ಜೀಪ್‍ನ ಚಾಲಕ ಪ್ರಶಾಂತ್‍ಗೆ ಸಣ್ಣಪುಟ್ಟ ಗಾಯವಾಗಿದೆ.

ಅಪಘಾತ ಸ್ಥಳಕ್ಕೆ ವೃತ್ತ ನಿರೀಕ್ಷಕ ಡಿ.ಜಿ ರಾಜಣ್ಣ, ಗ್ರಾಮಾಂತರ ಪೊಲೀಸ್ ಎಸ್‍ಐ ವನರಾಜು ಭೇಟಿ ನೀಡಿ ಜೀಪ್‍ನ ಚಾಲಕ ಪ್ರಶಾಂತನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News