×
Ad

ಮಹಿಳೆ ಆತ್ಮಹತ್ಯೆ: ಕುಟುಂಬದವರಿಂದ ಕೊಲೆ ಆರೋಪ

Update: 2017-12-18 22:26 IST

ದಾವಣಗೆರೆ, ಡಿ.18: ನಗರದ ವಿನೋಬನಗರದಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇಲ್ಲಿನ ರಮ್ಯಾ (23) ಸಾವನ್ನಪ್ಪಿದ ಮಹಿಳೆ. ಆದರೆ, ಅವರ ಸಾವು ಅನುಮಾನಾಸ್ಪದವಾಗಿದ್ದು, ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ರಮ್ಯಾ ಕುಟುಂಬದವರು ಆರೋಪಿಸಿದ್ದಾರೆ. ಜಗಳೂರು ತಾಲೂಕಿನ ವೆಂಕಟೇಶಪುರದ ರಮ್ಯಾ ಅವರನ್ನು ಒಂದೂವರೆ ವರ್ಷದ ಹಿಂದೆ ದಾವಣಗೆರೆಯ ವಿನೋಬನಗರದ ಶ್ರೀನಿವಾಸ್ ನಾಯ್ಕ ಅವರೊಂದಿಗೆ ವಿವಾಹ ನೆರವೇರಿಸಲಾಗಿತ್ತು. ಮದುವೆಯಾದ ಸಂದರ್ಭ 6 ಲಕ್ಷ ಹಣ, 6 ತೊಲ ಬಂಗಾರ ವರದಕ್ಷಿಣೆ ನೀಡಲಾಗಿತ್ತು. ಆದರೆ, ಶ್ರೀನಿವಾಸ್ ನಾಯ್ಕಾ ಪದೇಪದೆ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಇದರಿಂದ ಬೇಸತ್ತು ರವಿವಾರ ರಮ್ಯಾಳನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News