×
Ad

ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆ: ಆರೋಪ

Update: 2017-12-18 22:35 IST

ಮುಂಡಗೋಡ, ಡಿ.18: ತಾಲೂಕಿನ ಪಾಳಾ ಗ್ರಾಮದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಸರಕಾರಿ ಆಸ್ಪತ್ರೆಯ ಕಟ್ಟಡದ ಕಾಮಗಾರಿಯು ಕಳಪೆ ಮಟ್ಟದ್ದಾಗಿದೆ ಎಂದು ಆರೋಪಿಸಿ, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

 ಕಟ್ಟಡವು ಎಲ್ಲೆಂದರಲ್ಲಿ ಸೋರುತ್ತಿದ್ದು ರೋಗಿಗಳು ಆತಂಕ ಸೃಷ್ಟಿಸುವಂತ ವಾತಾವರಣ ನಿರ್ಮಾಣವಾಗಿದೆ.ಗುತ್ತಿಗೆದಾರ ತನ್ನ ಆದಾಯವನ್ನು ನಿರೀಕ್ಷಿಸಿ ಕಳಪೆ ಕಾಮಗಾರಿ ನಡೆಸಿರಬಹುದು ಎಂದು ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸಲ್ಲಿಸುವ ವೇಳೆ ತಾಲೂಕು ಅಧ್ಯಕ್ಷ ಪಾಂಡುರಂಗ ಪವಾರ, ಪಾಳಾ ಗ್ರಾಮ ಅಧ್ಯಕ್ಷ ದಿಲೀಪ್‌ಆರ್.ಹೀರಾಬಾಯಿ, ಉಪಾಧ್ಯಕ್ಷ ಶರೀಫ್ ಶಿಗ್ಗಾಂವ, ರವಿ ವಾಲ್ಮೀಕಿ, ಕಿರಣ ದೊಡ್ಮನಿ, ಉದಯ ಅಂಗಡಿ, ಶೇದಿಯಪ್ಪಶೇದಿಯಣ್ಣವರ, ಗಣೇಶ ಪೂಜಾರ, ನಾಗರಾಜ ಛಲವಾದಿ, ಸೋಮಣ್ಣ ಕೊರಗರ, ಮಂಜುನಾಥ ಓಣಿಕೇರಿ, ರಿತೇಶ್ ಸಂಗಯ್ಯನವರ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News