ನಲಿಯುತ್ತಾ ಕಲಿಯುವ ವಿಚಾರ ಶ್ಲಾಘನೀಯ: ಸತೀಶ್ ಕುಮಾರ್

Update: 2017-12-18 17:45 GMT

ಮಡಿಕೇರಿ, ಡಿ.18: ಗ್ರಾಮಾಂತರ ವಿದ್ಯಾರ್ಥಿಗಳಿಗೆ ಚಿಕ್ಕಂದಿನಲ್ಲಿಯೇ ವಿಜ್ಞ್ಞಾನದ ಕುರಿತಾಗಿ ಅರಿವು ಮೂಡಿಸುವಲ್ಲಿ ಜಿಲ್ಲೆಗೆ ಪರಿಚಯಿಸಲ್ಪಟ್ಟಿರುವ ವಿಜ್ಞಾನ ವಾಹಿನಿಗಳು ತಮ್ಮ ಉದ್ದೇಶ ಸಾರ್ಥಕಗೊಳ್ಳಲಿ. ನಲಿಯುತ್ತಾ ಕಲಿಯುವ ವಿಚಾರವಾಗಿ ವಿಜ್ಞಾನ ವಿಷಯವನ್ನು ವಿಜ್ಞ್ಞಾನ ವಾಹಿನಿಗಳು ಬೋಧಿಸುವುದು ಶ್ಲಾಘನೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಮೇರಿಕಾದ ಸೆಂಟ್ರಲ್ ಚೆಸ್ಟರ್ ಕೌಂಟಿ ರೋಟರಿ ಕ್ಲಬ್ ನೀಡಿದ ಗ್ಲೋಬಲ್ ಗ್ರ್ಯಾಂಟ್ ಯೋಜನೆಯ 22.50 ಲಕ್ಷ ರೂ. ಅನುದಾನದಲ್ಲಿ, ಸರಗೂರಿನ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ 3 ತಾಲೂಕುಗಳ ಹೈಸ್ಕೂಲ್‌ಗಳಿಗಾಗಿ ತಲಾ 1 ವಾಹನದಂತೆ ಕೊಡಗು ಜಿಲ್ಲೆಯಲ್ಲಿ ಒಟ್ಟು 3 ವಿಜ್ಞಾನ ವಾಹಿನಿ ಹೆಸರಿನ ಸಂಚಾರಿ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀರಾಮಕೃಷ್ಣಾಶ್ರಮದ ಸ್ವಾಮೀಜಿ ಪರಹಿತಾನಂದ ಮಹಾರಾಜ್ ಮಾತನಾಡಿ, ಚಿಕ್ಕವರಲ್ಲಿರುವ ವಿಜ್ಞಾನದ ಕುರಿತಾಗಿನ ಅನೇಕ ಸಂದೇಹದ ಹಸಿವನ್ನು ನೀಗಿಸಲು ವಿಜ್ಞಾನವಾಹಿನಿ ಯಶಸ್ವಿಯಾಗಲಿ ಎಂದು ಹಾರೈಸಿದರು. ರೋಟರಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಮಾತನಾಡಿ, ವಿಜ್ಞಾನದ ಆಳಕ್ಕೆ ಇಳಿದಷ್ಟೂ ನಮಗೆ ಅತೀ ಹೆಚ್ಚಿನ ಜ್ಞ್ಞಾನ ದೊರಕುತ್ತದೆ. ಸರಳವಾಗಿ ವಿಜ್ಞಾನ ವಿಚಾರಗಳನ್ನು ಕಲಿಸುವ ನಿಟ್ಟಿನಲ್ಲಿ ವಿಜ್ಞಾನ ವಾಹಿನಿಗಳ ಸಂಚಾರ ಶ್ಲಾಘನೀಯ. ಸಮುದಾಯಕ್ಕೆ ಉತ್ತಮ ಸೇವೆ ನೀಡುವಂಥ ಇಂಥ ಯೋಜನೆಗಳು ಮತ್ತಷ್ಟು ಜಾರಿಯಾಗಲಿ ಎಂದು ಆಶಿಸಿದರು.

  ಸರಗೂರಿನಲ್ಲಿರುವ ವಿವೇಕಾನಂದ ಯೂತ್ ಮೂವ್‌ಮೆಂಟ್ ಕಾರ್ಯದರ್ಶಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಎ.ಬಾಲಸುಬ್ರಹ್ಮಣ್ಯ ಮಾತನಾಡಿದರು. ಅಮೆರಿಕದ ರೋಟರಿ ಸೆಂಟ್ರಲ್ ಚೆಸ್ಟರ್ ಕೌಂಟಿ ರೋಟರಿ ಕ್ಲಬ್‌ನ ಪ್ರತಿನಿಧಿ ಡಾ.ವಸಂತ ಪ್ರಭು ಹಾಗೂ ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಮಹೇಶ್ ನಲ್ವಾಡೆ ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿ ಸಾವಿತ್ರಿ ಮಾತನಾಡಿದರು. ವಿವೇಕಾನಂದ ಯೂತ್ ಮೂವ್‌ಮೆಂಟ್ ಜಂಟಿ ಕಾರ್ಯದರ್ಶಿ ಎಸ್.ಪ್ರವೀಣ್ , ವಿಜ್ಞ್ಞಾನ ವಾಹಿನಿ ಯೋಜನೆಯ ಪ್ರಧಾನ ಸಂಯೋಜಕ ಕೆ.ಕೆ.ವಿಶ್ವನಾಥ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿದರು. ಈ ಸಂದರ್ಭದಲ್ಲಿ ರೋಟರಿ ಜಿಲ್ಲೆಯ ನಿಕಟಪೂರ್ವ ಗವರ್ನರ್ ಡಾ.ನಾಗಾರ್ಜುನ, ರೋಟರಿ ಫೌಂಡೇಶನ್ ಸಮಿತಿಯ ಜಿಲ್ಲಾಧ್ಯಕ್ಷ ಡಾ.ಸೂರ್ಯನಾರಾಯಣ, ಸೋಮವಾರಪೇಟೆ ರೋಟರಿ ಕ್ಲಬ್‌ನ ಬಿ.ಎಸ್.ಸದಾನಂದ, ಗೋಣಿಕೊಪ್ಪಲು ರೋಟರಿ ಕ್ಲಬ್‌ನ ಡಾ.ಚಂದ್ರಶೇಖರ್, ಮಿಸ್ಟಿ ಹಿಲ್ಸ್‌ನ ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ವಸಂತ ಪ್ರಭು, ಡಾ.ಎಂ.ಎ.ಬಾಲಸುಬ್ರಹ್ಮಣ್ಯ, ಪ್ರವೀಣ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.

ಅನಿಲ್ ಎಚ್.ಟಿ, ಸ್ವಾಗತಿಸಿದರು. ಕಾರ್ಯದರ್ಶಿ ಪಿ.ಎಂ.ಸಂದೀಪ್ ವಂದಿಸಿದರು. ಡಾ.ಸಿ.ಆರ್. ಪ್ರಶಾಂತ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News