ಅಂಬೇಡ್ಕರ್ ಭವನ ಕಾಮಗಾರಿ ವಿಳಂಬ ಧೋರಣೆ ಖಂಡಿಸಿ ಧರಣಿ

Update: 2017-12-18 18:03 GMT

 ಮಂಡ್ಯ, ಡಿ.18: ಡಾ. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯ ವಿಳಂಬ ಧೋರಣೆ ಖಂಡಿಸಿ ಹಾಗೂ ಕಾಮಗಾರಿ ತ್ವರಿತಗೊಳಿಸಲು ಒತ್ತಾಯಿಸಿ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿತು.

ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಕಾರ್ಯಕರ್ತರು, ಕೂಡಲೇ ಕಾಮಗಾರಿ ತ್ವರಿತಗೊಳಿಸಲು ಒತ್ತಾಯಿಸಿದರು.

ಸಂವಿಧಾನ ಶಿಲ್ಪಿ, ಮಾನವತಾವಾದಿ, ವಿಶ್ವಜ್ಞಾನಿ ಅಂಬೇಡ್ಕರ್ ಅವರ ಹೆಸರಿನ ಭವನ ನಿರ್ಮಾಣ ಕಾಮಗಾರಿ ಆರಂಭವಾಗಿ ಹತ್ತು ವರ್ಷವಾದರೂ ಪೂರ್ಣಗೊಳಿಸಿಲ್ಲವೆಂದು ಅವರು ಕಿಡಿಕಾರಿದರು.

ಈ ಬಾರಿಯ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ವೇಳೆಗಾದರೂ ಭವನ ಲೋಕಾರ್ಪಣೆಯಾಗುತ್ತದೆಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈಗಲಾದರೂ ಭವನ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಿ ಸಂವಿಧಾನ ಜಾರಿಗೊಂಡ ಜ.26ರಂದು ಉದ್ಘಾಟನೆಗೆ ಅನುವು ಮಾಡಬೇಕು ಎಂದು ಒತ್ತಾಯಿಸಿದ ಅವರು, ವಿಳಂಬವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುಂಡಹಳ್ಳಿ ನಾಗರಾಜು, ಕೆ.ಎಂ.ಪಂಚಲಿಂಗಯ್ಯ, ಎನ್.ಬಿ.ರಾಜು, ಬಿ.ಎಸ್.ಚಂದ್ರಶೇಖರ್, ಶಿವರುದ್ರಯ್ಯ, ಬಿ.ಶಿವಲಿಂಗಯ್ಯ, ಟಿ.ಡಿ.ಬಸವರಾಜು, ಕೊಮ್ಮೇರಹಳ್ಳಿ ಕೃಷ್ಣಮೂರ್ತಿ, ಅಂದಾನಿ ಸೋಮನಹಳ್ಳಿ, ಶಿವಶಂಕರ್, ಎಂ.ಎಲ್.ಶಿವಲಿಂಗಯ್ಯ. ಜೆ.ರಾಮಯ್ಯ, ಸೂನಗಹಳ್ಳಿ ದೇವರಾಜು, ಸಂಪತ್, ಮಹೇಶ ಯಡಗನಹಳ್ಳಿ, ಡಾ.ಎಂ.ಸಿ.ಶಿವರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News