ಮೈಸೂರನ್ನು ನಿರ್ಗತಿಕ ಮುಕ್ತ ನಗರ ಮಾಡುವಂತೆ ಒತ್ತಾಯಿಸಿ ಧರಣಿ

Update: 2017-12-18 18:04 GMT

ಮೈಸೂರು, ಡಿ.18: ಮೈಸೂರು ನಗರವನ್ನು ನಿರ್ಗತಿಕ ಮುಕ್ತ ನಗರವನ್ನಾಗಿ ಮಾಡಲು ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ವೀ ಕೇರ್ ಸಂಸ್ಥೆಯಿಂದ ನಗರದಲ್ಲಿ ಧರಣಿ ನಡೆಸಿದರು.

 ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸೋಮವಾರ ಬೆಳಗ್ಗೆ ಸಮಾವೇಶಗೊಂಡ ಧರಣಿ ನಿರತರು, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಮಾರ್ಗಸೂಚಿ ಅನುಸಾರ ಮೈಸೂರು ನಗರದ ಜನಸಂಖ್ಯೆಗೆ ಅನುಗುಣವಾಗಿ ನಿರ್ಗತಿಕರ ತಂಗುದಾಣಗಳನ್ನು ಸ್ಥಾಪಿಸಬೇಕು. ಪ್ರಸಕ್ತ ಎರಡು ತಂಗುದಾಣಗಳನ್ನು ಸ್ಥಾಪಿಸಿ ಪಾಲಿಕೆಯು ಮುನ್ನಡೆಸುತ್ತಿದ್ದು, ತಂಗುದಾಣಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News