×
Ad

ತೃತೀಯ ಅಖಿಲ ಕರ್ನಾಟಕ ಯುವ ಕವಿ ಸಮ್ಮೇಳನದ ಸಂಚಾಲಕರಾಗಿ ಚಂದಕವಾಡಿ ರಾಜಶೇಖರ್ ನೇಮಕ

Update: 2017-12-19 22:35 IST

ಚಾಮರಾಜನಗರ,ಡಿ.19: ರಂಗೋತ್ರಿ ಸಾಂಸ್ಕೃತಿಕ ಸಂಸ್ಥೆ 2018 ಜನವರಿ 21 ಮತ್ತು 22ರಂದು ತೃತೀಯ ಅಖಿಲ ಕರ್ನಾಟಕ ಯುವ ಕವಿ ಸಮ್ಮೇಳನವನ್ನು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲಿ ನಡೆಯಲಿದೆ. ಅಖಿಲ ಕರ್ನಾಟಕ ತೃತೀಯ ಯುವಕವಿ ಸಮ್ಮೇಳನದ ಜಿಲ್ಲಾ ಸಂಚಾಲಕರಾಗಿ ಚಂದಕವಾಡಿ ರಾಜಶೇಖರ್ ಅವರನ್ನು ನೇಮಕ ಮಾಡಲಾಗಿದೆ ರಂಗೋತ್ರಿ ಸಂಸ್ಥಾಪಕ ಕಾರ್ಯದರ್ಶಿ ಕುಮಾರ್.ಕೆ.ಹೆಚ್ ತಿಳಿಸಿದ್ದಾರೆ.

ರಂಗೋತ್ರಿ ಸಾಂಸ್ಕೃತಿಕ  ಸಂಸ್ಥೆಯು 26 ವರ್ಷಗಳಿಂದ  ಸಾಹಿತ್ಯ, ಸಂಗೀತ ಹಾಗೂ ರಂಗಭೂಮಿ ಚಟುವಟಿಕೆಗಳಲ್ಲಿ ಕ್ರೀಯಶೀಲ ಸಂಸ್ಥೆಯಾಗಿ ರಾಜ್ಯ ಮಟ್ಟದ ಹಲವು ಸಾಂಸ್ಕøತಿಕ ಕಾರ್ಯಕ್ರಗಳನ್ನು ಸದಾ ಹಮ್ಮಿಕೊಳ್ಳುತ್ತಾ ಬಂದಿದೆ ಪ್ರತಿವರ್ಷ ಬುದ್ದನ ಬೆಳದಿಂಗಳ ಉತ್ಸವ ಎನ್ನವ  ಅಭೂತ ಪೂರ್ವ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News