×
Ad

ಕಡೂರು ಪುರಸಭೆ ಮರುಚುನಾವಣೆ ಕಾಂಗ್ರೆಸ್ ಗೆಲುವು

Update: 2017-12-20 19:18 IST

ಕಡೂರು, ಡಿ.20: ಪಟ್ಟಣದ 14ನೇ ವಾರ್ಡಿನ ಮರುಚುನಾವಣೆಯು ಇತ್ತೀಚೆಗೆ ನಡೆದಿದ್ದು, ಬುಧವಾರ ಬೆಳಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ಮತಗಳ ಎಣಿಕೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕುಮಾರ್ ಜಯ ಗಳಿಸಿದರು.

 14ನೇ ವಾರ್ಡಿನಲ್ಲಿ ಎರಡು ಬಾರಿ ಕಾಂಗ್ರೆಸ್ ಸದಸ್ಯರಾಗಿದ್ದ ಎಂ. ರೇಣುಕಾರಾಧ್ಯ ಅಕಾಲಿಕ ಮರಣದಿಂದಾಗಿ ತೆರವಾದ ಸ್ಥಾನಕ್ಕೆ ಮರುಚುನಾವಣೆಯು ನಡೆಯಿತು. ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಜೆ.ಡಿ.ಎಸ್. ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ತಟಸ್ಥ ನಿಲುವು ತಾಳಿತ್ತು.

 ಬಿ.ಜೆ.ಪಿ. ಅಭ್ಯರ್ಥಿ ಆನಂದ್ 201 ಮತ ಪಡೆದರೆ, ಪಕ್ಷೇತರ ಅಭ್ಯರ್ಥಿ ಪ್ರಭಾಕರ್ 11 ಮತ, ರಾಜು 2 ಮತ ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಕುಮಾರ್ 254 ಮತ ಗಳಿಸಿ 53 ಮತಗಳ ಅಂತರದಿಂದ ಜಯ ಗಳಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಕಡೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂತಸ ವ್ಯಕ್ತಪಡಿಸಿದರು.

 ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಶರತ್ ಕೃಷ್ಣಮೂರ್ತಿ, ಪುರಸಭ ಸದಸ್ಯರಾದ ಮೋಹನ್‍ಕುಮಾರ್, ಸೋಮಶೇಖರ್, ಮಂಜುನಾಥ್, ಎನ್. ಬಷೀರ್‍ಸಾಬ್, ಇಕ್ಬಾಲ್, ಮೈಲಾರಪ್ಪ, ಪಕ್ಷದ ವಕ್ತಾರ ಚಂದ್ರಮೌಳಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಜ್ಜಯ್ಯ ಒಡೆಯರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News