×
Ad

ಪರೇಶ್ ಮೇಸ್ತಾ ಸಾವು ಪ್ರಕರಣ: ಗಲಭೆ ನಡೆಸಿದವರಲ್ಲಿ 180 ಜನರ ಬಂಧನ; ಎಸ್ಪಿ

Update: 2017-12-20 19:56 IST

ಕಾರವಾರ, ಡಿ.20: ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಈವರೆಗೆ 180 ಜನರನ್ನು ಬಂಧಿಸಿ ಕ್ರಮಕೈಗೊಳ್ಳಲಾಗಿದೆ. ಸಿಸಿಟಿವಿ ಪುಟೇಜ್, ವೀಡಿಯೊ ಸಾಕ್ಷ್ಯ ಆಧರಿಸಿ ಪ್ರಕರಣದ ಯಾವೊಬ್ಬ ತಪ್ಪಿತಸ್ಥನೂ ತಪ್ಪಿಸಿಕೊಳ್ಳದಂತೆ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿವೀಡಿಯೊ ತುಣುಕನ್ನು ಆಧರಿಸಿ ತಪ್ಪಿತಸ್ಥರಿಗಾಗಿ ಬಲೆ ಬೀಸಲಾಗಿದೆ. ಈ ಕುರಿತಾಗಿ ವಿಶೇಷ ತಂಡ ಕೂಡ ರಚಿಸಲಾಗಿದೆ. ಆದಷ್ಟು ಶೀಘ್ರ ತಪ್ಪಿತಸ್ಥರನ್ನೆಲ್ಲ ಬಂಧಿಸುವ ಕಾರ್ಯವಾಗಲಿದೆ ಎಂದರು.

ಯಾವ ಅಮಾಯಕ ವ್ಯಕ್ತಿಯನ್ನೂ ಬಂಧಿಸಿಲ್ಲ. ದಾಖಲೆ ಪರಿಶೀಲಿಸಿಯೇ ಬಂಧಿಸಲಾಗಿದೆ. ಸದ್ಯಕ್ಕೆ ಹೊನ್ನಾವರ, ಕುಮಟಾ ಹಾಗೂ ಶಿರಸಿ, ಕಾರವಾರ ಸಹಜ ಸ್ಥಿತಿಯಲ್ಲಿದೆ. ಬಿಗಿಯಾದ ಪೊಲೀಸ್ ಬಂದೋಬಸ್ತ್ ಮುಂದುವರಿಸಬೇಕೇ, ಬೇಡವೇ ಎಂಬುದನ್ನು ಶೀಘ್ರದಲ್ಲಿ ನಿರ್ಣಯಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News