ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿಗಳು ಹಿಂದಕ್ಕೆ ಕರೆಸಿಕೊಳ್ಳಬೇಕು: ದೇವರಾಜ್ ಆಗ್ರಹ
ಚಿಕ್ಕಮಗಳೂರು, ಡಿ.20: ಜಿಲ್ಲೆಯ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ, ಮತೀಯ ಸೂಕ್ಷ್ಮತೆ ಎದುರಾಗಲು ಹೊಣೆಗಾರಿಕೆ ತೋರದೆ ಬೇಜವಾಬ್ದಾರಿತನ ತೋರುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ರೋಷನ್‍ಬೇಗ್ ಅವರನ್ನು ಮುಖ್ಯಮಂತ್ರಿಗಳು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ತಮ್ಮ ಪಕ್ಷ ಆಗ್ರಹ ಪಡಿಸುತ್ತದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ತಿಳಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅನೇಕಭಾಗ್ಯ ಗಳಲ್ಲಿ ಉಸ್ತುವಾರಿ ಸಚಿವರಾಗಿ ರೋಷನ್‍ಬೇಗ್ ಅವರ ನೇಮಕವೂ ಒಂದು ಭಾಗ್ಯವಾಗಿದ್ದು ಅವರು ಕಾಟಾಚಾರಕ್ಕೆ ಜಿಲ್ಲೆಗೆ ಬಂದು ಹೋಗುತ್ತಿದ್ದಾರೆ. ಉಸ್ತುವಾರಿ ಸಚಿವರು ಅವುಗಳ ಪರಿಹಾರಕ್ಕೆ ಆಸಕ್ತಿವಹಿಸುತ್ತಿಲ್ಲ.
ದತ್ತ ಜಯಂತಿ ಸಂದರ್ಭದಲ್ಲಿ ಮತೀಯ ಸೂಕ್ಷ್ಮತೆ ಎದುರಾಗಿದ್ದ ವೇಳೆಯೂ ಅವರು ಜಿಲ್ಲೆಗೆ ಬೇಟಿ ನೀಡಲಿಲ್ಲ. ಜಿಲ್ಲಾ ದಂಡಾಧಿಕಾರಿಗಳು ಕೆಲವು ಕಡೆ ನಿರ್ಬಂಧ ಆದೇಶ ಹೊರಡಿಸಿದ್ದರೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಇಡೀ ನಗರವನ್ನು ಬಂದ್ ಗೊಳಿಸಿ ಜನರು ಕಿರಿಕಿರಿ ಅನುಭವಿ ಸಿದ ಸಂದರ್ಭದಲ್ಲಿ ಉಸ್ತುವಾರಿ ಸಚಿವರು ಚಕಾರ ಎತ್ತಲಿಲ್ಲ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಅಂತಹ ಗಂಭೀರ ಸಮಸ್ಯೆಯನ್ನು ಜನತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಸಚಿವರು ಸ್ಥಳದಲ್ಲಿದ್ದು ಹೊಣೆ ನಿರ್ವಹಿಸಬೇಕಾಗಿತ್ತು. ಆದರೆ ಅವರು ತಮ್ಮ ಪೋನ್ ಸ್ವಚ್‍ಆಫ್‍ಮಾಡಿ ಕೊಂಡಿದ್ದರು. ತಮ್ಮ ರೋಷನ್‍ಬೇಗ್ ಅವ ರಿಗೆ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ. ಇಲ್ಲಿ ಅಧಿಕಾರಿ ಶಾಹಿ ಆಡಳಿತ ನಡೆ ಯುತ್ತಿದೆ. ಹೀಗಾಗಿ ಅವರ ಅಗತ್ಯ ಜಿಲ್ಲೆಯ ಜನತೆಗೆ ಇಲ್ಲ. ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಹೇಳಿದರು.
ಮೂಡಿಗೆರೆಯ ಬಸ್ನಿಯಲ್ಲಿ ಅರಣ್ಯಾಧಿಕಾರಿಗಳು ಅಮಾನವೀಯತೆ ತೋರಿದ್ದಾರೆ. ಒತ್ತುವರಿ ನೆಪದಲ್ಲಿ ನಾರಾಯಣಗೌಡ ಬೆಳೆಸಿದ 15 ಎಕರೆ ಪ್ರದೇಶದಲ್ಲಿ ಕಾಫಿ, ಮೆಣಸಿನ ಗಿಡ ಕೊಚ್ಚಿಹಾಕಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾ ಧಿಕಾರಿತನ ತೋರುತ್ತಿದ್ದಾರೆ. ಅರಣ್ಯ ಭೂಮಿ ಗುರ್ತಿಸಲು ಸರ್ವೆ ನಡೆ ಸಲು ಕೂಡ ಅಧಿಕಾರಿಗಳು ಒಪ್ಪುತ್ತಿಲ್ಲ. ಇವೆಲ್ಲವೂ ಉಸ್ತುವಾರಿ ಸಚಿವರು ಅಧಿಕಾರಿಗಳ ಮೇಲೆ ಹಿಡಿತ ಹೊಂದಿಲ್ಲದಿರುವುದು ಕಾರಣವಾಗಿದೆ ಎಂದರು.
ಈ ಕ್ಷೇತ್ರದ ಲೋಕಸಭಾ ಸದಸ್ಯರು ವಿಪಕ್ಷದವರಾಗಿ ಈ ಬಗ್ಗೆ ಪ್ರತಿಕ್ರಿಯಿ ಸುವುದಿಲ್ಲ. ಮಂಗಳೂರು, ಮೈಸೂರು, ಕೊಡಗು, ಶಿವಮೊಗ್ಗಕ್ಕೆ ಕ್ಷುಲ್ಲಕ ಕಾರಣಕ್ಕೆ ಮಾತನಾಡುತ್ತಾರೆ. ಅವರಿಗೆ ಮತನೀಡಿದ ಕಾಫಿ, ಅಡಿಕೆ, ಕಾಳು ಮೆಣಸುಬೆಳೆಗಾರರಸಮಸ್ಯೆಗೆ ಅವರು ಸ್ಪಂದಿಸುತ್ತಿಲ್ಲಎಂದು ದೂರಿದಅವರು, ಸಂಸದರಾಗಲು ಅವರು ಅನರ್ಹರು ಎಂದು ಟೀಕಿಸಿದರು.
ನಗರಕ್ಕೆ ಬಂದು ಹೋಗುವ ರೈಲಿನ ವೇಳಾಪಟ್ಟಿ ಬದಲಿಸುವ, ಸಕಲೇಶಪುರಕ್ಕೆ ಹೊಸಮಾರ್ಗ ನಿರ್ಮಿಸುವ ಕಾರ್ಯಕ್ಕೆ ಅವರು ಗಮನ ಹರಿಸುತ್ತಿಲ್ಲ. ಅವರದ್ದೇ ಪಕ್ಷದ ಕೇಂದ್ರ ಸರ್ಕಾರದಿಂದ ಈ ಜಿಲ್ಲೆಗೆ ಗುರ್ತಿಸಬಹುದಾದ ಒಂದೇ ಒಂದು ಯೋಜನೆ ತಂದಿಲ್ಲ. ರಾಜ್ಯ ಸರ್ಕಾರ ಕೂಡ ಜಿಲ್ಲಾ ಅಭಿವೃದ್ಧಿಪಡಿಸುವುದರಲ್ಲಿ ವಿಫಲವಾಗಿದೆ ಎಂದರು.
ನಗರಸಭಾಧ್ಯಕ್ಷರು ತೆರಿಗೆ ಸಂಗ್ರಹ ಹೊಣೆಗಾರಿಕೆಯನ್ನು ಖಾಸಗಿಗೆ ವಹಿಸುವ ಕುರಿತು ಹೇಳಿಕೆ ನೀಡಿದ್ದು ಅವರೇನು ಆರ್‍ಎಸ್‍ಎಸ್, ಬಿಜೆಪಿ ಕಾರ್ಯಕರ್ತರಿಗೆ ಲಾಭಮಾಡಿಕೊಡುವ ಪ್ರಯತ್ನ ನಡೆಸುತ್ತಿದ್ದಾರೆಯೇ ಎಂಧು ಪ್ರಶ್ನಿಸಿದ ದೇವರಾಜ್, ಖಾಸಗಿಗೆ ಹೊಣೆ ನೀಡಿದರೆ ನಗರಸಭಾ ಸಿಬ್ಬಂದಿಗಳ ಹೊಣೆಗಾರಿಕೆ ಏನು ಎಂದು ಪ್ರಶ್ನಿಸಿದರು. ಅಧ್ಯಕ್ಷರಿಗೆ ಅನುಭವದ ಕೊರತೆ ಇದೆ. ಅನುಭವಿ ಸದಸ್ಯರ ಸಲಹೆ ಪಡೆದು ಪೌರಾಡಳಿತ ವ್ಯವಸ್ಥೆ ಯನ್ನು ನಿರ್ವಹಿಸುವಂತೆ ಅವರು ಸಲಹೆಮಾಡಿದರು.
ನಗರದಲ್ಲಿ ಸುಮಾರು ನಾಲ್ಕು ಕೊಟಿ ತೆರಿಗೆ ವಸೂಲಿ ಬಾಕಿ ಇದೆ. ಅನೇಕಶಿಕ್ಷಣಸಂಸ್ಥೆಗಳು ಬಾಕಿ ಉಳಿಸಿ ಕೊಂಡಿದ್ದು ಬಡವರ ವಿರುದ್ಧ ತೆಗೆದು ಕೊಳ್ಳುವ ಕಠಿಣಕ್ರಮದಂತೆ ಈ ಸಂಸ್ಥೆ ಗಳ ವಿರುದ್ಧವೂ ತೆಗೆದುಕೊಂಡು ತೆರಿಗೆ ವಸೂಲಿ ಮಾಡಬೇಕೆಂದು ಹೇಳಿದರು.
ಗೋಷ್ಠಿಯಲ್ಲಿ ಮಂಜಪ್ಪ, ಚಂದ್ರಪ್ಪ, ಜಮೀಲ್‍ಅಹಮ್ಮದ್, ಹೊಲದಗದ್ದೆ ಗಿರೀಶ್, ಬೈರೇಗೌಡ, ನಿಡುವಾಳೆ ಚಂದ್ರು ಮತ್ತಿತರರಿದ್ದರು.